ಕನ್ನಡ ಚಿತ್ರರಂಗದ ಜನಪ್ರಿಯನಟ ದಿವಂಗತ ಚಿರಂಜೀವಿ ಸರ್ಜಾ ಪುತ್ರನ ಹೆಸರು ಈಗ ರಾಯನ್ ರಾಜ್ ಸರ್ಜಾ.
ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ನಡೆದ ನಾಮಕರಣ ಸಮಾರಂಭದಲ್ಲಿ ತಾಯಿ ಮೇಘನಾ ರಾಜ್ ತೊಡೆಯ ಮೇಲೆ ಕುಳಿತಿದ್ದ ಜ್ಯೂ. ಚಿರುವನ್ನು ರಾಯನ್ ರಾಜ್ ಸರ್ಜಾ ಎಂದು ಕುಟುಂಬ ಸದಸ್ಯರ ಹಾಗೂ ಆಪ್ತರ ಸಮ್ಮುಖದಲ್ಲಿ ಪ್ರಕಟಿಸಲಾಯಿತು.
ರಾಯನ್ ಅಂದರೆ ಸಂಸ್ಕೃತದಲ್ಲಿ ಯುವರಾಜ ಎಂಬ ಅರ್ಥವಿದೆ. ತಮ್ಮ ಪುತ್ರ ಯುವರಾಜನಂತೆ ಕಂಗೊಳಿಸಬೇಕೆಂಬ ಹೆತ್ತಮ್ಮನ ಬಯಕೆಯೂ ಈ ಹೆಸರಲ್ಲಿ ಅಡಗಿದೆ.
ಮಗುವಿಗೆ 10 ತಿಂಗಳು ತುಂಬಿದೆ. ಇಲ್ಲಿಯವರೆಗೆ ಮನೆಯವರು ತಮಗೆ ಇಷ್ಟಬಂದಂತ ಹೆಸರಿನಲ್ಲಿ ಮಗುವನ್ನು ಕರೆಯುತ್ತಿದ್ದರು.
ಹಿರಿಯ ನಟ ಸುಂದರ್‌ರಾಜ್ ದಂಪತಿಗಳ ಸಂಭ್ರಮ ಹೇಳತೀರದು. ತಮ್ಮ ಮೊಮ್ಮಗನ್ನು ಸುಂದರ್ ರಾಜ್ ಎತ್ತಿ ಮುದ್ದಾಡುತ್ತಿದ್ದ ದೃಶ್ಯ ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾದವು. ಸೆ. 3 ರಂದು ತಮ್ಮ ಮಗುವಿನ ಹೆಸರು ಬಹಿರಂಗಗೊಳ್ಳಲಿದೆ ಎಂದು ಮೇಘನಾ ರಾಜ್ ಈಗಾಗಲೇ ತಿಳಿಸಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್