December 29, 2024

Newsnap Kannada

The World at your finger tips!

JEE

JEE Main Exam Result Declared Today ಇಂದು ಜೆಇಇ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಕನ್ನಡ ಸೇರಿ 13 ಭಾಷೆಗಳಲ್ಲಿ ಜೆಇಇ ಪರೀಕ್ಷೆ ಬರೆಯಲು ಅವಕಾಶ

Spread the love

ರಾಷ್ಟ್ರೀಯ ಮಟ್ಟದ ಜಂಟಿ ಪ್ರವೇಶ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡ ದಲ್ಲೂ ಬರೆಯಬಹುದು.

ಜಂಟಿ ಪ್ರವೇಶ ಪರೀಕ್ಷೆ (ಜೆಇಇ) 2021ರ ಸಾಲಿನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತನ್ನ ಪ್ರಕಟನೆ ಯಲ್ಲಿ ತಿಳಿಸಿದೆ.

ಕನ್ನಡ, ಹಿಂದಿ, ಇಂಗ್ಲಿಷ್‌, ಗುಜರಾತಿ, ಮಲೆಯಾಳಂ, ಮರಾಠಿ, ಒಡಿಯಾ, ಬಂಗಾಳಿ, ಅಸ್ಸಾಂ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ಗಳನ್ನು ನಡೆಸಲು ಸಿದ್ದತೆ ಮಾಡಲಾಗುತ್ತಿದೆ.

ಪರೀಕ್ಷಾ ವೇಳಾ ಪಟ್ಟಿ

ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ) ಸೆಷನ್ -1 ಪರೀಕ್ಷೆಯು ಫೆಬ್ರವರಿ 23 ರಿಂದ ಫೆಬ್ರವರಿ 26, 2021 ರವರೆಗೆ, ಸೆಷನ್ -2 ಮಾರ್ಚ್ 15 ರಿಂದ ಮಾರ್ಚ್ 18, 2021 ರವರೆಗೆ, ಸೆಷನ್ -3 ಏಪ್ರಿಲ್ 27 ರಿಂದ ಏಪ್ರಿಲ್ 30 ರವರೆಗೆ, 2021 ಮತ್ತು ಸೆಷನ್- IV ಮೇ 24 ರಿಂದ ಮೇ 28, 2021 ರವರೆಗೆ ನಡೆಯಲಿದೆ.

Copyright © All rights reserved Newsnap | Newsever by AF themes.
error: Content is protected !!