ಬೆಂಗಳೂರಿನ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗಾರರ ಜೊತೆ ಮಾತನಾಡಿ, ಹಾಸನ ಟಿಕೆಟ್ ವಿಚಾರದಲ್ಲಿ ಯಾವುದೇ ದುಡುಕಿನ ತೀರ್ಮಾನ ಮಾಡಲ್ಲ ಎಂದರು.
ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯ, ಗೆಲ್ಲುವ ಮಾನದಂಡದ ಮೇಲೆ ಟಿಕೆಟ್ ಹಂಚಿಕೆ ಮಾಡಲಾಗುವುದು. ಎರಡನೇ ಪಟ್ಟಿಯಲ್ಲೇ ಹಾಸನ ಟಿಕೆಟ್ ಘೋಷಣೆ ಮಾಡಲಾಗುತ್ತದೆ. ಇವತ್ತು ಮಂಗಳವಾರ ಆಗಿದ್ದರಿಂದ ಪಟ್ಟಿ ಬಿಡುಗಡೆ ಮಾಡಲಿಲ್ಲ. ಹಾಸನ ಟಿಕೆಟ್ ಘೋಷಣೆ ಮಾಡದಿದ್ರೆ ಅದಕ್ಕೊಂದು ಕಥೆ ಸೃಷ್ಠಿ ಮಾಡುತ್ತಾರೆ ಎಂದರು.
ದೇವೇಗೌಡರು ನಾಡಿದ್ದು ಸಂಸತ್ ಅಧಿವೇಶನ ಮುಗಿಸಿ ಬರ್ತಾರೆ. ಬಳಿಕ ಹಾಸನ ಟಿಕೆಟ್ ಫೈನಲ್ ಮಾಡಿ ಎರಡನೇ ಪಟ್ಟಿ ಪ್ರಕಟವಾಗಲಿದೆ. ಹಾಸನ ವಿಚಾರದಲ್ಲಿ ಮಾಧ್ಯಮಗಳಿಂದ ದೊಡ್ಡ ಮಟ್ಟದ ಪ್ರಚಾರ ಸಿಗಲಿದೆ. ಇನ್ನೂ ಎರಡು ಮೂರು ಪರ್ಸೆಂಟ್ ಮತಗಳು ಏರಿಕೆಯಾಗಲಿದೆ ಎಂದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು