November 19, 2024

Newsnap Kannada

The World at your finger tips!

jds, election , protest

ಜೆಡಿಎಸ್ ನಿಂದ ‘ಜನತಾ ಪ್ರಣಾಳಿಕೆ’ ಬಿಡುಗಡೆ

Spread the love

ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಇಂದು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಚುನಾವಣಾ ಪ್ರಣಾಳಿಕೆ ಜನತಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ HD ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಬಿ ಎಂ ಫಾರೂಕ್, ಪಕ್ಷದ ಕಾರ್ಯಾಧ್ಯಕ್ಷ ಅಲ್ಕೋಡ್ ಹನುಮಂತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಜೆಡಿಎಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಜೆಡಿಎಸ್ ಪಕ್ಷದಿಂದ ಬಿಡುಗಡೆ ಮಾಡಿರುವ ಜನತಾ ಪ್ರಣಾಳಿಕೆ-2023ರಲ್ಲಿ ಪಂಚ ರತ್ನ ಯೋಜನೆಯ ಐದು ಅಂಶಗಳುಳ್ಳ ಈ ಯೋಜನೆಯನ್ನು ಜಾರಿಗೆ ತರುವುದೇ ಮುಂಬರುವ ನಮ್ಮ ಸರ್ಕಾರದ ಗುರಿಯಾಗಿದೆ. ಇದರ ಪ್ರಚಾರಕ್ಕಾಗಿ ಪಂಚರತ್ನ ರಥಯಾತ್ರೆಯು ರಾಜ್ಯದ 25 ಜಿಲ್ಲೆಗಳಿಂದ 102 ವಿಧಾನಸಭಾ ಕ್ಷೇತ್ರಗಳಲ್ಲಿ 103 ದಿನಗಳು ಚಲಿಸಿದ ಸಂದರ್ಭದಲ್ಲಿ ಪ್ರತಿ ಕ್ಷೇತ್ರದಲ್ಲೂ ಜನತೆ ಅಭೂತಪೂರ್ವವಾಗಿ ಸ್ವಾಗತಿಸಿ, ಪಕ್ಷವನ್ನು ಆಶೀರ್ವದಿಸಿದ್ದಾರೆ .

ಜನತಾ ಜಲಧಾರೆ, ಜನತಾ ಮಿತ್ರ, ಪಂಚರತ್ನ ರಥಯಾತ್ರೆ ಸಮಯದಲ್ಲಿ ಜನತೆಯಿಂದ ಸ್ವೀಕೃತವಾದ ಸಲಹೆ, ನಿರೀಕ್ಷೆ, ಆಪೇಕ್ಷೆಗಳನ್ನು ಆಧರಿಸಿ ಹಾಗೂ ಕರ್ನಾಟಕ ಸಮಗ್ರ ಅಭಿವೃದ್ಧಿಯ ಅಗತ್ಯತೆಗೆ ಅನುಗುಣವಾಗಿ ಜನತಾ ಪ್ರಣಾಳಿಕೆ ತಯಾರಿಸಲಾಗಿದೆ. KSRTC ಹಾಗೂ BMTC ಬಸ್ ಸಂಚಾರದಲ್ಲಿ ಮೇ 5 ರಿಂದ 13 ರವರೆಗೆ ವ್ಯತ್ಯಯ ಸಾಧ್ಯತೆ

ಸಾಮಾಜಿಕ ಭದ್ರತೆಯ ಅಡಿಯಲ್ಲಿ ಮಾತೃಶ್ರೀ ಯೋಜನೆ ಜಾರಿಗೊಳಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾಗುತ್ತದೆ. ವಿಧವಾ ವೇತನ 900 ರೂ ನಿಂದ 2500ಕ್ಕೆ ಹೆಚ್ಚಳ ಮಾಡಲಾಗುತ್ತದೆ. ವರ್ಷಕ್ಕೆ ಐದು ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ನೀಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಪರಿಹರಿಸಲಾಗುತ್ತದೆ ಎಂಬುದಾಗಿ ಭರವಸೆ ನೀಡಲಾಗಿದೆ.

15 ವರ್ಷ ಸೇವೆ ಮಾಡಿದ ನಿವೃತ್ತಿ ಆಗುವ ಕಾರ್ಯಕರ್ತರಿಗೆ ಪಿಂಚಣಿ ವ್ಯವಸ್ಥೆ ಹಾಗೂ ಕೃಷಿ ಕಾರ್ಮಿಕ ಕುಟುಂಬಕ್ಕೆ ಪ್ರತಿ ತಿಂಗಳು 2,500 ರೂ. ಸಹಾಯ ಧನ ಮಾಡುವುದು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆ ವಾರ್ಷಿಕ 10 ಸಾವಿರ ರೂ. ಸಹಾಯ ಧನ, ರೈತ ಯುವಕರನ್ನು ಮದುವೆ ಆಗೋರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು.

ಸಾರಿಗೆ ನೌಕರರಿಗೆ ನಗದುರಹಿತ ವೈದ್ಯಕೀಯ ಸವಲತ್ತು ನೀಡುವುದು ಹಾಗೂ ವೃತ್ತಿನಿರತ ವಕೀಲರ ರಕ್ಷಣೆಗೆ ಕಾಯ್ದೆ ಜಾರಿಗೊಳಿಸಲಾಗುವುದು. ವಕೀಲರ ಮಾಸಿಕ ಭತ್ಯೆ 2 ಸಾವಿರದಿಂದ 3 ಸಾವಿರ ರೂ. ಹೆಚ್ಚಳ ಮಾಡುವುದು. ಮುಸ್ಲಿಮರ 4% ಮೀಸಲಾತಿ ಮರು ಸ್ಥಾಪನೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆಗೆ ಬಜೆಟ್‌ನಲ್ಲಿ ಪ್ರತಿ ವರ್ಷ 5% ಮೀಸಲು ( ಬೌದ್ದ, ಪಾರ್ಸಿ, ಜೈನ, ಮುಸ್ಲಿಂ, ಸಿಖ್) ನೀಡುವುದು. ನ್ಯಾ. ಸಾಚಾರ್ ವರದಿ ಜಾರಿಗೆ ಸಮಿತಿ ರಚನೆ ಮಾಡುವುದು, ಅಶಕ್ತ ಪುರುಷ ಮತ್ತು ಅಬಲೆಯರಿಗೆ ಸಹಾರಾ ಯೋಜನೆ ಜಾರಿಗೊಳಿಸುವುದು.

ಕೋಮು ದ್ವೇಷ ಹರಡುವವರ ವಿರುದ್ಧ ಕ್ರಮಕ್ಕೆ ಕ್ಷಿಪ್ರ ವಿಚಾರಣೆಗೆ ನ್ಯಾಯಾಲಯ ಸ್ಥಾಪನೆ ಮಾಡುವುದು. ಮದರಸಾಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಒತ್ತು ಹಾಗೂ ಬೌದ್ಧ ಚೈತ್ಯಾಲಯ, ಜೈನ ಬಸದಿ, ಮಸೀದಿ, ಚರ್ಚ್ ರಕ್ಷಣೆಗೆ ಮತ್ತು ಜೀರ್ಣೋದ್ಧಾರಕ್ಕೆ ವಿಶೇಷ ಯೋಜನೆ ನೀಡಲಾಗುವುದು.

ಹೈಸ್ಕೂಲ್‌ನಲ್ಲಿ ಓದುವ ಎಲ್ಲಾ ಮಕ್ಕಳಿಗೆ ಉಚಿತ ಬೈಸಿಕಲ್, ಡಿಗ್ರಿ ಕಾಲೇಜು ಓದುವ 18 ವರ್ಷ ತುಂಬಿರುವ 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ಗಾಡಿ ನೀಡಲಾಗುವುದು. ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಪದವಿ, ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಅಂಗನವಾಡಿಗಳ ಬಲವರ್ಧನೆಗೆ ಕ್ರಮ, ಮಕ್ಕಳ ಅಪೌಷ್ಟಿಕ ನಿವಾರಣೆ ಕ್ರಮ ಕೈಗೊಳ್ಳಲಾಗುವುದು.

ಎಸ್‍ಸಿ – ಎಸ್‍ಟಿ ಒಳ ಮೀಸಲಾತಿ ಜಾರಿಗೆ ನ್ಯಾ.ಸದಾಶಿವ ಅಯೋಗದ ಶಿಫಾರಸು ಯಥಾವತ್ತಾಗಿ ಅನುಷ್ಠಾನಗೊಳಿಸುವುದು. ವಸತಿ ಯೋಜನೆಯಲ್ಲಿ SC-STಗೆ 50% ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತದೆ. ಬಗುರ್ ಹುಕ್ಕುಂ ಸಾಗುವಳಿ ಖಾಯಂ ಮಾಡಿ, ಬಡ ಉಳುಮೆದಾರರಿಗೆ ಮಂಜೂರು ಮಾಡಿ ಹಕ್ಕುಪತ್ರ ವಿತರಣೆ ಮಾಡಲಾಗುವುದು. ತ್ರಿಕೋನ ಸ್ಪರ್ಧೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ

ಕಲಾವಿದರ ಮಾಶಾಸನ 2 ಸಾವಿರದಿಂದ 4 ಸಾವಿರ ರೂ.ಗೆ ಹೆಚ್ಚಳ ಮಾಡಲಾಗುವುದು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ವಿಶೇಷ ಕಾಯ್ದೆ ಜಾರಿ ಮಾಡಲಾಗುವುದು. ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆ ಕನ್ನಡದಲ್ಲಿ ಬರೆಯಲು ಆದ್ಯತೆ ನೀಡಲು ಕೇಂದ್ರದ ಮೇಲೆ ಒತ್ತಾಯ ಮಾಡಲಾಗುವುದು.

ಮಾನವ- ವನ್ಯ ಸಂಘರ್ಷದಿಂದ ನೊಂದ ಸಂತ್ರಸ್ತರಿಗೆ ಪರಿಹಾರದೊಂದಿಗೆ ಉದ್ಯೋಗ ಭದ್ರತೆ ನೀಡುವುದು. ಸರ್ಕಾರಿ ಉದ್ಯೋಗಿಗಳಿಗೆ OPS ಜಾರಿ ಪರಿಶೀಲನೆ ಮಾಡುವುದು ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಪರಾಮರ್ಶಿಸಿ ಸೂಕ್ತ ಬದಲಾವಣೆ ಮಾಡಲಾಗುವುದು.

ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಸೇರಿದ ಪದವಿ, ಎಂಜಿನಿಯರಿಂಗ್, ಮೆಡಿಕಲ್ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಅಂಗನವಾಡಿಗಳ ಬಲವರ್ಧನೆಗೆ ಕ್ರಮ, ಮಕ್ಕಳ ಅಪೌಷ್ಟಿಕ ನಿವಾರಣೆ ಕ್ರಮ ಕೈಗೊಳ್ಳಲಾಗುವುದು.

ಒಂದು ವರ್ಷದ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ ಮಾಸಿಕ 8000 ರೂ. ಭತ್ಯೆ ನೀಡಲಾಗುವುದು. ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ ವಲಯಗಳಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ 10 ಲಕ್ಷ ರೂ. ಆರ್ಥಿಕ ನೆರವು ಹಾಗೂ ತರಬೇತಿ ಮತ್ತು ಸೇವೆಗಳನ್ನು ಒದಗಿಸುವ ನಿರುದ್ಯೋಗ ಯುವಕರಿಗೆ 3 ಲಕ್ಷ ರೂ. ಸಹಾಯ ಧನ ನೀಡುವುದು. ಸಣ್ಣ ಉದ್ಯಮವಾಗಿ ವ್ಯಾಪಾರ-ವಹಿವಾಟು ನಡೆಸುವವರಿಗೆ 2 ಲಕ್ಷ ರೂ. ಸಹಾಯಧನ ಹಾಗೂ ಸಣ್ಣ ಉದ್ಯಮ ನಡೆಸುವ ಮಹಿಳಾ ಉದ್ಯಮಿಗಳಿಗೆ ಭದ್ರತೆ ರಹಿತ 2 ಕೋಟಿ ರೂ.ವರೆಗೂ ಬ್ಯಾಂಕ್ ಮುಖೇನ ಸಾಲ ನೀಡಲಾಗುವುದು.

ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಸಿಎಂ ರಿಲೀಫ್ ಫಂಡ್‌ನಿಂದ 25 ಲಕ್ಷ ರೂ. ಪರಿಹಾರ ಧನ ಸಹಾಯ ನೀಡುವುದು. ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಅಡಿ ಸೇರ್ಪಡೆಯಾಗದ ಕಾಯಿಲೆಗೂ ಪರಿಹಾರ ಹಾಗೂ ಜಿಲ್ಲೆಗೊಂದು ಜಯದೇವ ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲಾಗುವುದು. ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ ನರರೋಗ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡಲಾಗುವುದು.

ರೇಷ್ಮೆ ನಾಡುಗಳಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಂದಾಜು ಮೊತ್ತದಲ್ಲಿ ರೇಷ್ಮೆ ಕ್ಲಸ್ಟರ್‌ಗಳ ಸ್ಥಾಪನೆ ಮಾಡಲಾಗುವುದು. ಇನ್ನುಳಿದ 15 ಜಿಲ್ಲೆಗಳಲ್ಲಿನ ಕೃಷಿ ಬೆಳೆ ಮತ್ತು ಉದ್ಯಮ ಆಧರಿತ ಉದ್ಯಮಗಳನ್ನು 5,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮುಂದಿನ ವರ್ಷಗಳಲ್ಲಿ ಸ್ಥಾಪಿಸಲಾಗುವುದು. 2003ರ ನಗರಸಭೆ ಕಾಯಿದೆ ಅನ್ವಯ. ರಾಜ್ಯದಲ್ಲಿರುವ ಪ್ರಮುಖ ಕೈಗಾರಿಕೆ ಅಭಿವೃದ್ಧಿ ಕೇಂದ್ರಗಳಲ್ಲಿ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಲಾಗುವುದು.

ವಿಮಾನಯಾನ ಉದ್ಯಮಕ್ಕೆ ಏರ್ ಬಸ್ – 320 ಒಳಗೊಂಡಂತೆ ಪೂರಕವಾದ ದುರಸ್ತಿ ಮತ್ತು ನಿರ್ವಹಣೆ ಘಟಕಗಳನ್ನು ಹಾಸನದಲ್ಲಿ ಸ್ಥಾಪಿಸಲಾಗುವುದು.

ಸಕ್ಕರೆ ನಾಡು ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಳದಲ್ಲಿ 1,000 ಕೋಟಿ ರೂ. ಅಂದಾಜು ಮೊತ್ತದಲ್ಲಿ ಹೊಸ ಮೈಶುಗರ್ ಕಾರ್ಖಾನೆ ಸ್ಥಾಪನೆ ಹಾಗೂ ಕಿತ್ತೂರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಚರ್ಮೋದ್ಯಮದ ಒಂದು ಕ್ಲಸ್ಟರ್‌ನ್ನು 1,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಸ್ಥಾಪನೆ ಮಾಡಲಾಗುವುದು.

ಚಿನ್ನದ ಗಣಿನಾಡು ಕೋಲಾರ ಜಿಲ್ಲೆ ತರಕಾರಿ – ಹಣ್ಣು ಹಂಪಲು ತವರೂರು. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಟೊಮೆಟೊ ಬೆಳೆ ಸಂಸ್ಕರಣೆಗೆ 1,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕ್ಲಸ್ಟರ್ ಸ್ಥಾಪನೆ ಮಾಡಲಾಗುವುದು.

ಮೈಸೂರು ಸೋಪ್ಸ್ ಅಂಡ್ ಡಿಟರ್ಜಂಟ್ ಲಿಮಿಟೆಡ್ ನ್ನು ಪುನಶ್ವೇತನಗೊಳಿಸುವ ಯೋಜನೆಯಲ್ಲಿ ಎರಡು ಜಿಲ್ಲೆಗಳಲ್ಲಿ ವಿಸ್ತರಣಾ ಘಟಕಗಳನ್ನು ಸ್ಥಾಪಿಸುವುದು ಮತ್ತು ದೇಶ ವಿದೇಶಗಳಲ್ಲಿ ಮೈಸೂರು ಸೋಪ್ಸ್ ಅಂಡ್ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜನೆಗಳನ್ನು ರೂಪಿಸಲಾಗುವುದು.

Copyright © All rights reserved Newsnap | Newsever by AF themes.
error: Content is protected !!