December 20, 2024

Newsnap Kannada

The World at your finger tips!

HD devegowda

ಗೋಹತ್ಯೆ ನಿಷೇಧ ಮಸೂದೆಗೆ ಜೆಡಿಎಸ್ ವಿರೋಧ – ದೇವೇಗೌಡ

Spread the love

ನಮ್ಮ ಪಕ್ಷವು ಗೋ ಹತ್ಯೆ ನಿಷೇಧ ಮಸೂದೆಯನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಮಂಡನೆಯಾಗಲಿರುವ ಈ ಮಸೂದೆ-2020 ಅನ್ನು ವಿರೋಧಿಸುವುದಾಗಿ ದೇವೇಗೌಡರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ
ಹೇಳಿದ್ದಾರೆ.

ಬಿಜೆಪಿ ಸರ್ಕಾರ ಮಂಡಿಸುತ್ತಿರುವ ಮಸೂದೆಯು ಜನರ ಬದುಕುವ ಮತ್ತು ಶಾಂತಿಯನ್ನು ಹಾಳು ಮಾಡಲಿದೆ. ಆದ್ದರಿಂದ ನಮ್ಮ ಪಕ್ಷ ಸಂಪೂರ್ಣವಾಗಿ ಮಸೂದೆಯನ್ನು ವಿರೋಧಿಸಲಿದೆ ಎಂದಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ-1964 ಜಾರಿಯಲ್ಲಿದೆ. 2010ರಲ್ಲೂ ಕಾಯ್ದೆಯಲ್ಲಿ‌ ಬದಲಾವಣೆ ಮಾಡಲು ಆಗಿನ ಬಿಜೆಪಿ ಸರ್ಕಾರ ಯತ್ನಿಸಿತ್ತು.‌ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜತೆಯಾಗಿ ವಿರೋಧಿಸಿದ್ದವು. ತಾವು ರಾಜ್ಯಪಾಲರು ಮತ್ತು ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗೆ ಒಪ್ಪಿಗೆ ನೀಡದಂತೆ‌ ಒತ್ತಾಯಿಸಿದ ಬಳಿಕ ಸ್ಪಷ್ಟನೆ ಕೇಳಿದ್ದರು. ಆ ಬಳಿಕ ಸರ್ಕಾರದ ನೇತೃತ್ವ ಬದಲಾಗಿದ್ದರಿಂದ ಹಳೆಯ ಕಾಯ್ದೆಯೇ ಜಾರಿಯಲ್ಲಿ ಉಳಿದಿದೆ ಗೌಡರು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!