November 13, 2024

Newsnap Kannada

The World at your finger tips!

sidda

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರೇ ತುಂಬಿದ್ದರೂ, ಮಂಡ್ಯ ಅಭಿವೃದ್ಧಿ ಶೂನ್ಯ ಯಾಕೆ: ಸಿದ್ದರಾಮಯ್ಯ

Spread the love

ಜಿಲ್ಲೆಯಲ್ಲಿ 6 ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ? ದಳಪತಿಗಳಿಗೆ ನಾವು ಮಂಡ್ಯ ಅಭಿವೃದ್ದಿ ಮಾಡಬೇಡ ಎಂದು ಹೇಳಿದ್ವಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಪರಿಷತ್ ಚುನಾವಣೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, 2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 100% ಗೆಲ್ತಾರೆ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಬಹುತೇಕರು ಕಾಂಗ್ರೆಸ್ ಗೆ ಸೇರುತ್ತಾರೆ ಎಂಬುದನ್ನು ಹೇಳಲಾರೆ ಎಂದರು

ಮಂಡ್ಯ ಅಭಿವೃದ್ಧಿಗೆ ಕಾಂಗ್ರೆಸ್ ಬಿಡಲಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅವರ ಕೈ ಹಿಡಿದುಕೊಂಡಿದ್ವ? ಏಳಕ್ಕೆ ಏಳು ಶಾಸಕರಿದ್ದಿದ್ದು ಅವರೇ. ಆದರೂ ಮಂಡ್ಯವನ್ನು ಅವರು ಏಕೆ ಅಭಿವೃದ್ಧಿ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ ಅವರು, ಜನ ಬಯಸಿದ್ರೆ ಶಾಸಕ ಆಗಬೇಕು. ಆದರೆ ಒಂದೇ ಫ್ಯಾಮಿಲಿ ಸುತ್ತ ಗಿರಕಿ ಹೊಡೆಯಬಾರದು ಎಂದು ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ಟೀಕಿಸಿದರು.

ಜೆಡಿಎಸ್ ಪಕ್ಷದಿಂದ ಮೈತ್ರಿ ನಿರಾಕರಣೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗ್ತಾರೆ. ಸ್ಥಳೀಯ ನಾಯಕರಿಗೆ ಇನ್ ಡೈರೆಕ್ಟ್ ಆಗಿ ಹೇಳಿ ಕೊಟ್ಟಿದ್ದಾರೆ ಎಂದು ಜೆಡಿಎಸ್ ನಡೆ ಬಗ್ಗೆ ವ್ಯಂಗ್ಯವಾಡಿದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವುದು ಸತ್ಯ. ನಾನು ಯಾವುದೋ ಜಾತಿಯಲ್ಲಿ ಹುಟ್ಟಿರಬಹುದು. ಇವತ್ತಿನವರೆಗೆ ನನಗೆ ರಾಜಕೀಯದಲ್ಲಿ ಜಾತಿ ಭೇದ ಮಾಡಿ ಗೊತ್ತಿಲ್ಲ. ಜಾತಿ ಭೇದವನ್ನು ಯಾರು ಮಾಡಬಾರದು ಎಂಬುದೇ ನನ್ನ ಸಿದ್ಧಾಂತದ ಸೆಕ್ಯುಲರಿಸಂ ಮತ್ತು ನಮ್ಮ ಸಂವಿಧಾನದ ಸೆಕ್ಯುಲರಿಂ ಆಗಿದೆ. ಜಾತಿ ವ್ಯವಸ್ಥೆ ಹೋಗಿದೆ ಎಂದು ಹೇಳುವುದಕ್ಕೆ ಆಗಲ್ಲ. ಆದರೆ ರಾಜಕಾರಣದಲ್ಲಿ ನಾನು ಜಾತಿ ಮಾಡಲ್ಲ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!