January 5, 2025

Newsnap Kannada

The World at your finger tips!

jiletin

ಜಿಲೆಟಿನ್ ತುಂಬಿದ ಲಾರಿ ಸ್ಪೋಟ:ಜೆಡಿಎಸ್ ಮುಖಂಡ ನರಸಿಂಹ,ಗುತ್ತಿಗೆದಾರ ಸುಧಾಕರ್ ಬಂಧನ‌

Spread the love

ಕಲ್ಲು ಗಣಿ ಪ್ರದೇಶದಲ್ಲಿ ಜಿಲೆಟಿನ್ ಸ್ಫೋಟಗೊಂಡು ದುರಂತಕ್ಕೆ ಸಂಬಂಧಿಸಿ ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಜೆಡಿಎಸ್ ಮುಖಂಡ ನರಸಿಂಹ ಹಾಗೂ ಗಣಿ ಪ್ರದೇಶದ ಗುತ್ತಿಗೆದಾರ ಸುಧಾಕರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಜೆಡಿಎಸ್ ಮುಖಂಡ ನರಸಿಂಹ ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್​ ಪೂರೈಸುತ್ತಿದ್ದ. ಹಾಗೂ ಸುಧಾಕರ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ.

ನರಸಿಂಹ ಕಲ್ಲು ಕೊಟ್ಟರೆ ಸುಧಾಕರ್ ಕಲ್ಲು ಪುಡಿ ಮಾಡ್ತಿದ್ದ. ಇನ್ನು ಕಲ್ಲು ಗಣಿಗಾರಿಕೆ ಪಾಲುದಾರಿಕೆಯಲ್ಲಿ ನಡೆಯುತಿತ್ತು. ಕ್ರಷರ್​ಗೆ ಸುಧಾಕರ್, ಮುಮ್ತಾಜ್, ಅವಿನಾಶ್ ಪಾಲುದಾಲರರಾಗಿದ್ದರು. ಅನಿಲ್ ಎಂಬುವವರ ಅಜ್ಜಿ ಜಮೀನಿನಲ್ಲೇ ಈ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು.

ಈ ಮೂವರು ಮೂರು ಪಕ್ಷಗಳ ರಾಜಕೀಯ ಮುಖಂಡರ ಆಪ್ತರಾಗಿದ್ದರು. ರಾಜಕೀಯ ನಾಯಕರ ಬೆಂಬಲದಿಂದಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಯಾರು ಪ್ರಶ್ನಿಸುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!