ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಜಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಈ ಹಿಂದೆ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದ ಜಯಶ್ರೀ, ‘ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು.
ಘಟನೆ ವಿವರ :
ಬೆಂಗಳೂರಿನಲ್ಲಿರುವ ಕಡಬಗೆರೆ ಕ್ರಾಸ್ ಜನಪ್ರಿಯ ಬಳಿಯ ಪ್ರಗತಿ ಲೇಔಟ್ನ ಮನೆಯಲ್ಲಿ ತಡರಾತ್ರಿ ಜಯಶ್ರೀ ರಾಮಯ್ಯ ನೇಣಿಗೆ ಶರಣಾಗಿದ್ದಾರೆ.
ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯ ಪ್ರಗತಿ ಲೇಔಟ್ನಲ್ಲಿ ಘಟನೆ ನಡೆದಿದೆ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ದಯಾ ಮರಣ ಕೇಳಿದ್ದಳು…..:
ಈ ಹಿಂದೆ ಫೇಸ್ಬುಕ್ ಪೋಸ್ಟ್ ನಲ್ಲಿಯೂ ನಟಿ ಜಯಶ್ರೀ ರಾಮಯ್ಯ ತಮಗೆ ದಯಾಮರಣ ಕೊಡಿ ಅಂತಾ ಹಾಕಿಕೊಂಡಿದ್ದರು. ಆ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದರು.
ಆ ವೇಳೆಯೇ ಜಯಶ್ರೀ ರಾಮಯ್ಯ ಎಷ್ಟರ ಮಟ್ಟಿಗೆ ಅವರು ಖಿನ್ನತೆಗೆ ಒಳಗಾಗಿದ್ದಾರೆ ಅನ್ನೋದು ಭಾರೀ ಚರ್ಚೆಗೆ ಕಾರಣವಾಗಿತ್ತು.
ತಮ್ಮ ಫೇಸ್‍ಬುಕ್‍ನಲ್ಲಿ ಐ ಕ್ವಿಟ್, ನಾನು ಸಾಯ್ತಿನಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಗೂ ವಿಡಿಯೋಗಳನ್ನೂ ಜಯಶ್ರೀ ಅವರು ಹಾಕಿಕೊಂಡಿದ್ದರು.
ನನಗೆ ದಯಾ ಮರಣ ಕೊಡಿ ಅಂತ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ್ದರು. 55 ಸೆಕೆಂಡ್ಗಳ ಕಾಲ ಮಾತನಾಡಿದ್ದ ಅವರು, ನಂಗೆ ಸಾಯಲು ಬಿಡಿ ಅಂತ ಅಳಲು ತೋಡಿಕೊಂಡಿ ದ್ದರು. ಅಲ್ಲದೇ ಪಬ್ಲಿಸಿಟಿಗೋಸ್ಕರ ನಾನು ಈ ರೀತಿ ಮಾಡ್ತಿಲ್ಲ. ನನಗೆ ಯಾವುದೇ ಆರ್ಥಿಕ ನಿರೀಕ್ಷೆ ಅಥವಾ ತೊಂದರೆ ಇಲ್ಲ. ನನಗೆ ಬೇಕಾಗಿರೋದು ಸಾವು. ನಾನು ತುಂಬಾ ಡಿಪ್ರೆಷನ್ನಲ್ಲಿದ್ದೀನಿ. ಫ್ಯಾಮಿಲಿ ಸಮಸ್ಯೆಯಿಂದ ನೊಂದಿದ್ದೀನಿ. ನನ್ನ ಜೀವನದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ನನ್ನಿಂದ ಅದನ್ನು ಮರೆಯೋದಕ್ಕೆ ಆಗ್ತಿಲ್ಲ. ನಾನು ಲೂಸರ್, ನಾನು ಹುಚ್ಚಿ. ದಯವಿಟ್ಟು ಮರ್ಸಿ ಕಿಲ್ಲಿಂಗ್ಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ