ನ್ಯೂಸ್ ಸ್ನ್ಯಾಪ್
ಬೆಂಗಳೂರು.
ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಆಪ್ತೆ ಶಶಿಕಲಾ ೨೦೨೧ ಜನವರಿಯಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ತಮಿಳುನಾಡಿನ ಬಿಜೆಪಿ ಮುಖಂಡರೊಬ್ಬರು ಶಶಿಕಲಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ನೀಡಿದ ಹೇಳಿಕೆಯ ಹಿನ್ನಲೆಯಲ್ಲಿ ನರಸಿಂಹ ಮೂರ್ತಿ ಎಂಬುವವರು ಕೇಂದ್ರ ಕಾರಾಗೃಹಕ್ಕೆ ಆರ್ ಟಿ ಐ ಮುಖಾಂತರ ಮಾಹಿತಿ ಕೋರಿದ್ದರು. ಇದಕ್ಕೆ ಉತ್ತರಿಸಿರುವ ಜೈಲಿನ ಅಧಿಕಾರಿಗಳು, ಶಶಿಕಲಾ ಮುಂದಿನ ವರ್ಷ ಜನವರಿ ೨೭ರಂದು ಬಿಡುಗಡೆಯಾಗಲಿದ್ದಾರೆ. ಒಂದು ವೇಳೆ ನ್ಯಾಯಾಲಯವು ಅವರಿಗೆ ವಿಧಿಸಿರುವ ದಂಡ ೧೦ ಕೋಟಿ ರು ಗಳನ್ನು ತುಂಬದೇ ಇದ್ದಲ್ಲಿ ಇನ್ನೂ ಒಂದು ವರ್ಷ ಸಜೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
೨೦೧೭ ಫೆಬ್ರುವರಿ ೧೫ರಂದು ಅಕ್ರಮ ಆಸ್ತಿ ಹೊಂದಿದ್ದ ಆರೋಪದ ಮೇಲೆ ಶಶಿಕಲಾ ಅವರು ಅವರು ತಮ್ಮ ಆಪ್ತರಾದ ಇಳವರಸಿ ಮತ್ತು ಇ.ಎನ್. ಸುಧಾಕರನ್ ಅವರ ಜೊತೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಬಂಧಿಸಲ್ಪಟ್ಟಿದ್ದರು.
More Stories
ಬೆಂಗಳೂರು-ಮೈಸೂರು ರೈಲು ಸಂಚಾರ ವಿಳಂಬ
ಬೆಂಗಳೂರಿನ 83 ವರ್ಷದ ವೃದ್ಧೆಗೆ 1.24 ಕೋಟಿ ರೂ. ವಂಚನೆ
ಎಸ್ಬಿಐಯಲ್ಲಿ 13,735 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ