December 19, 2024

Newsnap Kannada

The World at your finger tips!

DOCTOR,news,medical

Dr. Manjunath's tenure as Director of Jayadeva Hospital has been extended by 1 year ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ ಮಂಜುನಾಥ್‌ ಸೇವಾವಧಿ 1 ವರ್ಷ ವಿಸ್ತರಣೆ #Thenewsnap #latestnews #karnataka #kannadanews #Hospital #jaideva #Mandyanews #Mysuru

ಜಯದೇವ ಆಸ್ಪತ್ರೆ ನಿರ್ದೇಶಕರನ್ನಾಗಿ ಡಾ. ಮಂಜುನಾಥ್​ರನ್ನೇ ಮುಂದುವರಿಸಲು ಒತ್ತಾಯ

Spread the love

ಜಯದೇವ ಆಸ್ಪತ್ರೆ ಹಾಲಿ ನಿರ್ದೇಶಕ ಡಾ. ಸಿ.ಎನ್ ಮಂಜುನಾಥ್​ ಅವರ ಸೇವಾ ಅವಧಿ ಜುಲೈ 19 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಡಾ ಮಂಜುನಾಥ್ ಅವರನ್ನೇ ಮುಂದುವರೆಸುವಂತೆ ವೈದ್ಯರು ಹಾಗೂ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಮುಂದಿನ ನಿರ್ದೇಶಕರನ್ನಾಗಿ ಯಾರನ್ನು ನೇಮಿಸಬೇಕು ಎಂಬ ನಿರ್ಧಾರ ಸರ್ಕಾರ ಇನ್ನಷ್ಟೇ ಕೈಗೊಳ್ಳಬೇಕಿದೆ.ಇದನ್ನು ಓದಿ –ವಿಧಾನಸೌಧದ ಮೂರನೇ ಮಹಡಿಯಲ್ಲಿ ಅಗ್ನಿ ದುರಂತ

ಈ ಮಧ್ಯೆ ಡಾ. ಮಂಜುನಾಥ್​​ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಿ ಎಂದು ಸರ್ಕಾರದ ಮೇಲೆ ಗಣ್ಯರು ಭಾರೀ ಒತ್ತಡ ಹಾಕುತ್ತಿದ್ದಾರೆ.

ಡಾ. ಮಂಜುನಾಥ್​ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸೋದು ಬೇಡ ಎಂದು ಕೆಲವು ಸಚಿವರು ಒತ್ತಾಯಿಸಿದ್ದಾರೆ. ಹಾಗಾಗಿ ಸರ್ಕಾರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಹಾಲಿ ನಿರ್ದೇಶಕ ಡಾ. ಮಂಜುನಾಥ್​ ಅವರನ್ನೇ ಮುಂದುವರಿಸಿ, ಇಲ್ಲದೇ ಹೋದಲ್ಲಿ ಒಪಿಡಿಯನ್ನು ಬಂದ್​​ ಮಾಡಿ ಧರಣಿ ಮಾಡುತ್ತೇವೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಒಪಿಡಿಯನ್ನು ಬಂದ್​ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಬಾರದು ಎಂದು ಆಸ್ಪತ್ರೆ ಸಿಬ್ಬಂದಿಗೆ ಡಾ. ಮಂಜುನಾಥ್​ ಅವರು ಮನವಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!