ಜನವರಿ 27ಕ್ಕೆ ಎಐಡಿಎಂಕೆ ಮಾಜಿ ನಾಯಕಿ ಶಶಿಕಲಾ ಕಾರಾಗೃಹ ದಿಂದ ಬಿಡುಗಡೆ

Team Newsnap
1 Min Read

ಅಕ್ರಮ ಆಸ್ತಿ ಸಂಪಾದನೆ ಆರೋಪ ಸಾಬೀತಾದ ನಂತರ ಕಳೆದ ನಾಲ್ಕು ವರ್ಷಗಳಿಂದಲೂ ಪರಪ್ಪನ ಅಗ್ರಹಾರ ಜೈಲಿ ನಲ್ಲಿ ಶಿಕ್ಷೆ ಅನುಭವಿಸಿದ ತಮಿಳುನಾಡಿನ ಎಐಡಿಎಂಕೆ ನಾಯಕಿ ವಿ ಕೆ ಶಶಿಕಲಾ ಜ.27 ರಂದು ಬೆಳಗಿನ ಜಾವ ಬಿಡುಗಡೆಯಾಗಲಿದ್ದಾರೆ.

ಶಶಿಕಲಾ ಜ. 27 ರಂದು ಬೆಳಿಗ್ಗೆ ಬಿಡುಗಡೆಯಾಗಲಿದ್ದಾರೆಂದು ಜೈಲಿ‌ನ ಮುಖ್ಯ ಅಧೀಕ್ಷಕರು ಮೇಲ್ ಮೂಲಕ ಈ ಮಾಹಿತಿ ನೀಡಿರುವುದಾಗಿ ಶಶಿಕಲಾ ಪರ ವಕೀಲ ಎನ್. ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ.

ಶಶಿಕಲಾ ಬಿಡುಗಡೆ ಸಂಬಂಧಿಸಿದಂತೆ ವಕೀಲ ರಾಜಾ ಪ್ರಶ್ನೆ ಮಾಡಿ ಜೈಲಾಧಿಕಾರಿಗಳಿಗೆ ಮೇಲ್ ಮಾಡಿದ್ದರು.

ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದಂತೆ 2014 ರಲ್ಲಿ ನ್ಯಾಯಾಲಯವು ನೀಡಿದ್ದ ತೀರ್ಪು ಪ್ರಶ್ನಿಸಿ ಆರೋಪಿಗಳು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದರು. 2017 ರಲ್ಲಿ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು.

ಶಶಿಕಲಾ ಕಡೆಯಿಂದ ಬರಬೇಕಾಗಿರುವ 10 ಕೋಟಿ 10 ಸಾವಿರ ರುಗಳನ್ನು ಪಾವತಿ ಮಾಡುವಂತೆ ನ್ಯಾಯಾಲಯವು ಕಳೆದ ಸೆಪ್ಟೆಂಬರ್ ಸೂಚನೆ ನೀಡಿತ್ತು.

ಈ ಸೂಚನೆ ಹಿನ್ನೆಲೆಯಲ್ಲಿ ಶಶಿಕಲಾ ಕುಟುಂಬದವರು ನ್ಯಾಯಾಲಯವು ಹೇಳಿದ ದಂಡದ ಹಣವನ್ನು ಪೂರ್ತಿಯಾಗಿ ಪಾವತಿ ಮಾಡಿದೆ. ಅಲ್ಲದೆ ಶಶಿಕಲಾ ಬಿಡುಗಡೆ ನಂತರ ಆಕೆಯ ವಾಸಕ್ಕೆ ಎರಡು – ಮೂರು ಬಂಗಲೆ ಗಳನ್ನೂ ಕೂಡ ಸಿದ್ದ ಮಾಡಿ ಇಟ್ಟುಕೊಂಡಿದ್ದಾರೆಂದು ಗೊತ್ತಾಗಿದೆ.

Share This Article
Leave a comment