ಜಾಮಿಯಾ ಮಸೀದಿ ವಿವಾದ : ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

Team Newsnap
1 Min Read

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಜಾಮಿಯಾ ಮಸೀದಿಯ ವಿವಾದ ಹಲವು ವರ್ಷಗಳಿಂದ‌ ಕೇಳಿ ಬರುತ್ತಿದ್ದು ,ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಹೋರಾಟ ಮಾಡಿದ್ದರು.

ಹಲವು ವರ್ಷಗಳಿಂದ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹನುಮಂತ ಭಕ್ತರು ಪ್ರತಿಭಟನೆ ಹಾಗೂ ಬೃಹತ್ ಹನುಮ ಸಂಕೀರ್ತನಾ ಯಾತ್ರೆಯ ಮೂಲಕ ಹೋರಾಟ ನಡೆಸಿದ್ದರು.

ಇದೀಗ ಭಜರಂಗ ಸೇನೆ 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

ಇಷ್ಟು ದಿನಗಳ ಕಾಲ ಪ್ರತಿಭಟನೆಗಳ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದರು .

ಪಾರಂಪರಿಕ ಕಟ್ಟದಲ್ಲಿ ಮದರಸವನ್ನು ನಡೆಸಲಾಗುತ್ತಿದ್ದು ,ಅಲ್ಲದೇ ಜಾಮಿಯಾ ಒಂದು ಮಸೀದಿಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಟಿಪ್ಪು ಸುಲ್ತಾನ್ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಇಲ್ಲಿನ ಗೋಡೆಗಳಲ್ಲಿ ಇರುವ ಹಿಂದೂ ದೇವಸ್ಥಾನ ಕಲ್ಲುಗಳು, ಕೆತ್ತನೆಗಳು. ಅಲ್ಲದೇ ಮಸೀದಿಯ ಒಳ ಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶವಿದೆ.

ಈ ಸಾಕ್ಷಿಗಳು ಇದು ಮಸೀದಿಯಲ್ಲ ಮಂದಿರ ಎಂದು ನಿರೂಪಿಸುತ್ತವೆ. ಹೀಗಾಗಿ ಜಾಮಿಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ಗೆ ದಾವೆ ಹೂಡಿದೆ.

ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡಿದ್ದು ,ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್ ನೋಟೀಸ್ ನೀಡಿದೆ.ಮಾಜಿ ಸಚಿವ ನಾಗೇಂದ್ರ, ದದ್ದಲ್ ನಿವಾಸಗಳ ಮೇಲೆ ED ದಾಳಿ : ಬಂಧನ ಸಾಧ್ಯತೆ

ಜು.11 (ನಾಳೆ) ರಂದು ಈ ಕೇಸ್‌ ಸಂಬಂಧ ಮೊದಲ ವಾದ-ಪ್ರತಿವಾದಗಳು ನಡೆಯಲಿದ್ದು ,ಅಂದು ನೋಟಿಸ್ ನೀಡಿರುವ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

Share This Article
Leave a comment