December 28, 2024

Newsnap Kannada

The World at your finger tips!

80 jalli

ಮದುರೈನಲ್ಲಿ ಜಲ್ಲಿಕಟ್ಟು ಸ್ಪಧೆ೯ : ಯುವಕ ಸಾವು – 80 ಮಂದಿಗೆ ಗಾಯ

Spread the love

ತಮಿಳುನಾಡಿನಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಓರ್ವ ಸಾವನ್ನಪ್ಪಿ, 80 ಜನ ಗಾಯಗೊಂಡಿದ್ದಾರೆ.
ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಈ ಸ್ಪರ್ಧೆ ನಡೆದಿದೆ.

ಸುಮಾರು 300ಕ್ಕೂ ಅಧಿಕ ಗೂಳಿಗಳು ಆಗಮಿಸಿದ್ದವು. ಈ ಗೂಳಿಗಳನ್ನು ಪಳಗಿಸಲು ನೂರಾರು ಸಂಖ್ಯೆಯಲ್ಲಿ ಯುವಕರು ಕೂಡ ಬಂದಿದ್ದರು.

ಈ ಸಂದರ್ಭದಲ್ಲಿ 18 ವರ್ಷದ ಓರ್ವ ಯುವಕನ ಎದೆಗೆ ಗೂಳಿ ತಿವಿದಿದ್ದರಿಂದ, ಯುವಕ ಸಾವನ್ನಪ್ಪಿದ್ದಾನೆ.

ಈ ಘಟನೆಯಲ್ಲಿ 80 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರತಿ ವರ್ಷದ ಸಂಕ್ರಮಣದ ದಿನದಂದು ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

Copyright © All rights reserved Newsnap | Newsever by AF themes.
error: Content is protected !!