Trending

40 ವರ್ಷದ ಸಿನಿ ಜರ್ನಿ ನೆನೆದು ಗಳಗಳ ಅತ್ತ ನಟ ಜಗ್ಗೇಶ್​

ಚಿತ್ರರಂಗದಲ್ಲಿ 40 ಪೂರೈಸಿರುವ ನವರಸ ನಾಯಕ ಜಗ್ಗೇಶ್​ ಗಳಗಳನೇ ಕಣ್ಣೀರಿಟ್ಟಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಜಗ್ಗೇಶ್ ನಾನು ಓರ್ವ ಮಿಡಲ್​ ಕ್ಲಾಸ್​ ಕುಟುಂಬದಿಂದ ಬಂದವ. ಈ ಹುಡುಗನಿಗೆ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ, ದೇವರು ನಡೆಸಿಕೊಂಡು ಬಂದಿದ್ದಾರೆ ಅಂತ ನೆನದು ಭಾವುಕರಾಗಿದ್ದಾರೆ.

ಸಿನಿಮಾದಿಂದ ರಾಜಕೀಯ ಬಂದ ಕಥೆಯೇ ಡಿಫರೆಂಟ್​. ಒಂದು ಸಮಾರಂಭಕ್ಕೆ ಡಿಕೆ ಶಿವಕುಮಾರ್​ ಜಗ್ಗೇಶ್​ರನ್ನು ಆಹ್ವಾನಿಸಿದರಂತೆ. ಅದೇ ಸಂದರ್ಭ ರಾಜಕೀಯದ ಮಾತು ಬಂದ ನಂತರ ಅದ್ಹೇಗೋ ಜಗ್ಗೇಶ್​ ರಾಜಕೀಯಕ್ಕೆ ಕಾಲಿಟ್ಟರು. ಸಿನಿರಂಗದ ಜೊತೆಗೆ ರಾಜಕೀಯದ ಜರ್ನಿ ಸೇರಿ, ಅದು ಹೇಗೆ 40 ವರ್ಷ ಕಂಪ್ಲೀಟ್​ ಆಯ್ತು ಅನ್ನೋದೇ ನನಗೆ ತಿಳಿಯುತ್ತಿಲ್ಲ ಅಂತಾರೇ ನವರಸ ನಾಯಕ ಜಗ್ಗೇಶ್.

ಶಿವಣ್ಷ ಅವಕಾಶ ಕೊಟ್ಟರು:

ರಾಯರನ್ನು ಪೂಜೆ ಮಾಡಿ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರು ರಣರಂಗ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿದರು. ಅಲ್ಲಿಂದ ನನ್ನ ಸಿನಿಮಾ ಬದುಕು ಆರಂಭವಾಯಿತು. ಅಣ್ಣಾವ್ರ ಜೊತೆಗೆ ಕಾಲ ಕಳೆಯಲು ಆ ದಿನಗಳು ನನಗೆ ನೆರವಾದವು ಎಂದು ಹೇಳಿದ್ದಾರೆ.

ಕರುಣಾಮಯಿ ಅಂಬಿ ಅಣ್ಣ:

ರೌಡಿ ಎಂಎಲ್ಎ ಸಿನಿಮಾದಲ್ಲಿ ನಾನು ಅಂಬರೀಶ್ ಅವರ ಜೊತೆ ನಟಿಸಿದ್ದೆ. ಅಂಬಿ ಅವರು ನನ್ನ ಕುರಿತು ಲೇ ಕರಿಯಾ ಹೀರೋ ಆಗು ಅಂದಿದ್ದರು. ನಾನು ನಾಯಕನಾದೆ. ಕಷ್ಟ ಪಟ್ಟು ಮೊದಲ ಸಿನಿಮಾ ನಿರ್ಮಿಸಿದೆ. ಬಿಡುಗಡೆಗೆ ಹಣ ಇಲ್ಲದೆ ಕುಳಿತಿದ್ದಾಗ ತಡರಾತ್ರಿ 2 ಗಂಟೆಗೆ ಅಂಬಿ ಮನೆಗೆ ಹೋದೆ ಬೈದು ಕಳಿಸಿದ್ರು. ಆದರೆ, ತಮ್ಮ ಸ್ನೇಹಿತರ ಕಡೆಯಿಂದ 5 ಲಕ್ಷ ರೂ. ಹಣ ಕೊಡಿಸಿದರು. ನನ್ನ ಸಿನಿಮಾಗೆ ಅಂಬರೀಶ್ ಅವರನ್ನು ಕರೆದು ಗೆಸ್ಟ್ ರೋಲ್ ಮಾಡಿಸಿದೆ. ಸಿನಿಮಾ ಆ ಕಾಲದಲ್ಲೇ ಒಂದು ಕೋಟಿ ರೂ. ಗಳಿಸಿತ್ತು ಎಂದು ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024