ಚಿತ್ರರಂಗದಲ್ಲಿ 40 ಪೂರೈಸಿರುವ ನವರಸ ನಾಯಕ ಜಗ್ಗೇಶ್ ಗಳಗಳನೇ ಕಣ್ಣೀರಿಟ್ಟಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಜಗ್ಗೇಶ್ ನಾನು ಓರ್ವ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದವ. ಈ ಹುಡುಗನಿಗೆ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ, ದೇವರು ನಡೆಸಿಕೊಂಡು ಬಂದಿದ್ದಾರೆ ಅಂತ ನೆನದು ಭಾವುಕರಾಗಿದ್ದಾರೆ.
ಸಿನಿಮಾದಿಂದ ರಾಜಕೀಯ ಬಂದ ಕಥೆಯೇ ಡಿಫರೆಂಟ್. ಒಂದು ಸಮಾರಂಭಕ್ಕೆ ಡಿಕೆ ಶಿವಕುಮಾರ್ ಜಗ್ಗೇಶ್ರನ್ನು ಆಹ್ವಾನಿಸಿದರಂತೆ. ಅದೇ ಸಂದರ್ಭ ರಾಜಕೀಯದ ಮಾತು ಬಂದ ನಂತರ ಅದ್ಹೇಗೋ ಜಗ್ಗೇಶ್ ರಾಜಕೀಯಕ್ಕೆ ಕಾಲಿಟ್ಟರು. ಸಿನಿರಂಗದ ಜೊತೆಗೆ ರಾಜಕೀಯದ ಜರ್ನಿ ಸೇರಿ, ಅದು ಹೇಗೆ 40 ವರ್ಷ ಕಂಪ್ಲೀಟ್ ಆಯ್ತು ಅನ್ನೋದೇ ನನಗೆ ತಿಳಿಯುತ್ತಿಲ್ಲ ಅಂತಾರೇ ನವರಸ ನಾಯಕ ಜಗ್ಗೇಶ್.
ಶಿವಣ್ಷ ಅವಕಾಶ ಕೊಟ್ಟರು:
ರಾಯರನ್ನು ಪೂಜೆ ಮಾಡಿ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೆ. ಅವರು ರಣರಂಗ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಿದರು. ಅಲ್ಲಿಂದ ನನ್ನ ಸಿನಿಮಾ ಬದುಕು ಆರಂಭವಾಯಿತು. ಅಣ್ಣಾವ್ರ ಜೊತೆಗೆ ಕಾಲ ಕಳೆಯಲು ಆ ದಿನಗಳು ನನಗೆ ನೆರವಾದವು ಎಂದು ಹೇಳಿದ್ದಾರೆ.
ಕರುಣಾಮಯಿ ಅಂಬಿ ಅಣ್ಣ:
ರೌಡಿ ಎಂಎಲ್ಎ ಸಿನಿಮಾದಲ್ಲಿ ನಾನು ಅಂಬರೀಶ್ ಅವರ ಜೊತೆ ನಟಿಸಿದ್ದೆ. ಅಂಬಿ ಅವರು ನನ್ನ ಕುರಿತು ಲೇ ಕರಿಯಾ ಹೀರೋ ಆಗು ಅಂದಿದ್ದರು. ನಾನು ನಾಯಕನಾದೆ. ಕಷ್ಟ ಪಟ್ಟು ಮೊದಲ ಸಿನಿಮಾ ನಿರ್ಮಿಸಿದೆ. ಬಿಡುಗಡೆಗೆ ಹಣ ಇಲ್ಲದೆ ಕುಳಿತಿದ್ದಾಗ ತಡರಾತ್ರಿ 2 ಗಂಟೆಗೆ ಅಂಬಿ ಮನೆಗೆ ಹೋದೆ ಬೈದು ಕಳಿಸಿದ್ರು. ಆದರೆ, ತಮ್ಮ ಸ್ನೇಹಿತರ ಕಡೆಯಿಂದ 5 ಲಕ್ಷ ರೂ. ಹಣ ಕೊಡಿಸಿದರು. ನನ್ನ ಸಿನಿಮಾಗೆ ಅಂಬರೀಶ್ ಅವರನ್ನು ಕರೆದು ಗೆಸ್ಟ್ ರೋಲ್ ಮಾಡಿಸಿದೆ. ಸಿನಿಮಾ ಆ ಕಾಲದಲ್ಲೇ ಒಂದು ಕೋಟಿ ರೂ. ಗಳಿಸಿತ್ತು ಎಂದು ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.
More Stories
ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ
ಓದಿದರೂ ಪರೀಕ್ಷೆಯ ಭಯವೇಕೆ?
ಮುಡಾ ಹಗರಣ: ದಾಖಲೆ ಒದಗಿಸಿದವರಲ್ಲಿ ಕಾಂಗ್ರೆಸ್ ನಾಯಕರು ಸಹ ಇದ್ದರು – ಸ್ನೇಹಮಯಿ ಕೃಷ್ಣಾ