ಪ್ರಪಂಚದಾದ್ಯಂತ ಕೊರೋನಾ ಮುಕ್ತವಾಗಲು ಇನ್ನೂ 10 ವರ್ಷ ಸಮಯ ಬೇಕು ಎಂದು ಕೋಡಿ ಮಠದ ಶ್ರೀ ಗಳು ಹಾಸನದಲ್ಲಿ ಭವಿಷ್ಯ ನುಡಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಶ್ರೀ ಗಳು ಕೊರೋನಾ ಸಧ್ಯಕ್ಕೆ ಕೊನೆ ಎಂಬುದಿಲ್ಲ. ಸಂಪೂರ್ಣ ಕೊರೋನಾ ಮುಕ್ತವಾಗಲು ಇನ್ನೂ 10 ವರ್ಷಬೇಕು ಎಂದರು.
ನಮ್ಮ ಭೂಮಿಯಲ್ಲಿ ಸತ್ವವೇ ಇಲ್ಲ. ಇದರಿಂದ ಬೆಳೆದ ಬೆಳೆಗಳೆಲ್ಲಾ ರಾಸಾಯನಿಕಯುಕ್ತವಾಗಿವೆ. ವಿಷ ಆಹಾರ ಸೇವನೆ ಮಾಡಿದರೆ ರೋಗ ಬರದೇ ಇರುತ್ತದೆಯೇ? ರಾಗಿ ಗಟ್ಟಿ ಆಹಾರ ಹಾಗೂ ವಿಷಮುಕ್ತ ವಾಗಿತ್ತು. ಈಗ ರಾಗಿಗೂ ಕೂಡ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ಅದೂ ಕೂಡ ವಿಷವಾಗಿದೆ ಎಂದು ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗುತ್ತದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಗಂಡಾಂತರ ಗಳನ್ನು ತಪ್ಪಿಸುದು ಕಷ್ಟ ಎಂದರು
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ