December 24, 2024

Newsnap Kannada

The World at your finger tips!

WhatsApp Image 2022 03 28 at 3.33.37 PM

ಕಬ್ಬು ಬೆಳೆಯುವ ರೈತ ಮಹಿಳೆ :ಮಾಜಿ ಪ್ರಧಾನಿ HD ದೇವೇಗೌಡರ ಪತ್ನಿ ಚೆನ್ನಮ್ಮಗೂ IT ನೋಟಿಸ್

Spread the love

ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್​​​ ನೀಡಿದ್ದಾರೆ.

ಮಾಜಿ ಸಚಿವ ಎಚ್​.ಡಿ ರೇವಣ್ಣ ಈ ಕುರಿತಂತೆ ಮಾತಾಡಿದ ರೇವಣ್ಣ ನಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುತ್ತೇವೆ, ಅದನ್ನು ನೋಡಬೇಕು. ಐಟಿ ಅಧಿಕಾರಿಗಳು ಕಬ್ಬು ಬೆಳೆಯೋದು ನೋಡದೆ ತಾಯಿಗೆ ನೋಟಿಸ್​​ ಕೊಟ್ಟಿದ್ದಾರೆ ಎಂದರು.

ಆರ್​​ಟಿಓ ಇಲಾಖೆಯಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ. ಒಂದು ಎಕರೆಯಲ್ಲಿ ಎಷ್ಟು ಬೆಳೆಯುತ್ತಿದ್ದೇವೆ, ಯಾವ ಬೆಳೆ ಬೆಳೆಯುತ್ತೇವೆ ಎಂದು ಬಂದು ನೋಡಲಿ ಎಂದರು.

ಈ ಬಗ್ಗೆ ಸರ್ವೇ ಮಾಡಿಸಿ ಎಂದು ಡಿಸಿಗೆ ಹೇಳಿದ್ದೇನೆ. ನಾನು ಸರ್ವೇ ಮಾಡಿಸೋದು ಸರಿಯಲ್ಲ. ವ್ಯವಸಾಯ ಮಾಡೋ ನಮಗ್ಯಾಕೆ ನೋಟಿಸ್​​..? ನೂರಾರು ಕೋಟಿ ಲೂಟಿ ಮಾಡೋರಿಗೆ ಯಾಕಿಲ್ಲ ನೋಟಿಸ್​..? ಎಂದು ಪ್ರಶ್ನಿಸಿದರು.

Copyright © All rights reserved Newsnap | Newsever by AF themes.
error: Content is protected !!