ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯವೇನಲ್ಲ ಎಂಬ ನಿಯಮವಿತ್ತು. ಆದರೆ, ಮಾಸ್ಕ್ ಧರಿಸುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ಬಿಬಿಎಂಪಿ ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ.
ಒಬ್ಬರೇ ಇದ್ದೇವೆ, ಯಾಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ವಾದಿಸುತ್ತಿದ್ದ ವಾಹನ ಸವಾರರಿಗೆ ಬಿಬಿಎಂಪಿ ಶಾಕ್ ನೀಡಿದೆ.
ಬಿಬಿಎಂಪಿ ಮಾರ್ಷಲ್ಗಳ ಜೊತೆ ವಾದಕ್ಕೆ ಇಳಿಯುತ್ತಿದ್ದ ಜನರಿಗೆ ಇನ್ನುಮುಂದೆ ಹೊಸ ನಿಯಮ ಜಾರಿಗೊಳಿಸಿದೆ. ನಿನ್ನೆಯಿಂದ ಹೊಸ ರೂಲ್ಸ್ ಜಾರಿ ಮಾಡಿದ ಬಿಬಿಎಂಪಿ ಒಬ್ಬರೇ ಇದ್ದರೂ ಅದು ಕಾರು ಆಗಲಿ ಬೈಕ್ ಆಗಲಿ ಮಾಸ್ಕ್ ಧರಿಸಲೇಬೇಕು ಎಂಬ ನಿಯಮ ಜಾರಿಗೊಳಿಸಿದೆ.
ಆದರೆ, 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಒಂಟಿಯಾಗಿರುವ ಕಾರು, ಬೈಕ್ ಸವಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಕಲಿಲ್ಲ ಎಂದರೆ ದಂಡ ಗ್ಯಾರಂಟಿ. ಮಾಸ್ಕ್ ಹಾಕದಿದ್ದರೆ 250 ರೂ. ದಂಡ ಕಟ್ಟಲೇಬೇಕು. ಇಂದಿನಿಂದಲೇ ಬಿಬಿಎಂಪಿ ಈ ನಿಯಮವನ್ನು ಜಾರಿಗೊಳಿಸಿದೆ.
5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಹೋಟೆಲ್ ನಲ್ಲಿ ತಿಂಡಿ, ಟೀ , ಕಾಫಿ ಕುಡಿಯುವಾಗ ಮಾಸ್ಕ್ ಬೇಕಿಲ್ಲ. ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಬೇಕಿಲ್ಲ. ಶ್ರವಣ ದೋಷ ಸಾಧನ ಅಳವಡಿಕೆಗೆ ತೊಂದರೆ ಆದರೆ ಮಾಸ್ಕ್ ಬೇಕಿಲ್ಲ. ತೀವ್ರ ಉಸಿರಾಟದ ತೊಂದರೆ, ಹಲ್ಲಿನ ತೊಂದರೆ ಇದ್ದರೆ ಮಾಸ್ಕ್ ಬೇಕಿಲ್ಲ, ಆದರೆ ಇದಕ್ಕೆ ವೈದ್ಯರ ಸಲಹಾ ಚೀಟಿ ಜೊತೆಯಲ್ಲೇ ಇರಬೇಕು.
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ