January 11, 2025

Newsnap Kannada

The World at your finger tips!

5486360b 93b0 4c5f b1a3 a2d00e3a5729

ಐಟಿ ಕ್ಷೇತ್ರ: ಶಾಶ್ವತ ವರ್ಕ್​ ಫ್ರಮ್ ಹೋಂ – ಕೇಂದ್ರ ಉತ್ತೇಜನ

Spread the love

ಟೆಕ್ ಉದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಇಂದು ಕೆಲ ಪ್ರಮುಖ ಸುಧಾರಣೆಗಳನ್ನು ಘೋಷಣೆ ಮಾಡಿದೆ.

ರಿಜಿಸ್ಟ್ರೇಷನ್​ ಹಾಗೂ ಕಂಪ್ಲಯನ್ಸ್​ನ ಅಗತ್ಯತೆಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ತೆಗೆದು ಹಾಕುವ ಮೂಲಕ, ಐಟಿ ಹಾಗೂ ಬಿಪಿಓ ಕಂಪನಿಗಳಲ್ಲಿ ಉದ್ಯೋಗಿಗಳು ಶಾಶ್ವತವಾಗಿ ವರ್ಕ್​ ಫ್ರಮ್ ಹೋಂ ಮಾಡಲು ಅನುಕೂಲ ಮಾಡಿಕೊಟ್ಟಿದೆ.

ನಿನ್ನೆ ಟೆಲಿಕಾಮ್ ಇಲಾಖೆ, ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಇತರೆ ಸೇವಾ ಪೂರೈಕೆದಾರರು (Other Service Providers-OSP)ಗೆ ರೆಜಿಸ್ಟ್ರೇಷನ್​​​ ಅಗತ್ಯತೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದೆ.

 ಡೇಟಾ ಸಂಬಂಧಿತ ಕೆಲಸದಲ್ಲಿ ತೊಡಗಿರುವ ಬಿಪಿಓ ಉದ್ಯಮವನ್ನು, ಇತರೆ ಸೇವಾ ಪೂರೈಕೆದಾರರ ನಿಯಮಗಳ ವ್ಯಾಪ್ತಿಯಿಂದ ಹೊರ ತೆಗೆಯಲಾಗಿದೆ. ಜೊತೆಗೆ ಬ್ಯಾಂಕ್ ಗ್ಯಾರಂಟಿಗಳ ಠೇವಣಿ, ಸ್ಥಿರ ಐಪಿಗಳು, ಆಗಾಗ್ಗೆ ವರದಿ ಮಾಡುವ ಜವಾಬ್ದಾರಿ, ನೆಟ್‌ವರ್ಕ್ ಡಯಾಗ್ರಾಮ್ ಪ್ರಕಟಣೆ, ದಂಡ ವಿಧಿಸುವಿಕೆ ಮುಂತಾದ ಅಗತ್ಯತೆಗಳನ್ನು ಕೂಡ ತೆಗೆದುಹಾಕಲಾಗಿದೆ.

ಕೆಲಸದ ಆಯ್ಕೆಯ ಅವಕಾಶ:

ಕಂಪನಿಗಳು ವರ್ಕ್​ ಫ್ರಮ್​ ಹೋಂ ಅಥವಾ ವರ್ಕ್​ ಫ್ರಮ್ ಎನಿವೇರ್ ಪಾಲಿಸಿ (ಮನೆಯಿಂದ ಅಥವಾ ಎಲ್ಲಿಂದ ಬೇಕಾದ್ರೂ ಕೆಲಸ ಮಾಡುವ ಆಯ್ಕೆ) ಅಳವಡಿಸಿಕೊಳ್ಳಲು ತೊಡಕಾಗುವ ಇತರೆ ಹಲವು ನಿಯಮಗಳನ್ನು ಕೂಡ ತೆಗೆಯಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಸುಗಮ ವ್ಯಾಪಾರಕ್ಕೆ ಉತ್ತೇಜನ ನೀಡಲು ಹಾಗೂ ದೇಶವನ್ನು ಟೆಕ್​ ಹಬ್​ ಮಾಡಲು ನಾವು ಬದ್ಧರಾಗಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಸರ್ಕಾರದ ಈ ಕ್ರಮದ ಕುರಿತಾಗಿ ಟ್ವೀಟ್ ಮಾಡಿದ್ದಾರೆ.

ಐಟಿ ಕ್ಷೇತ್ರಕ್ಕೆ ಉತ್ತೇಜನ

ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್​ ಕೂಡ ಟ್ವೀಟ್ ಮಾಡಿ, ಸರ್ಕಾರದ ಈ ನಿರ್ಧಾರದಿಂದ ಐಟಿ,  ಮಾಹಿತಿ ತಂತ್ರಜ್ಞಾನ ಸೇವೆ (ITeS) ಉದ್ಯಮ ಹಾಗೂ ಬಿಪಿಓ ಇಂಡಸ್ಟ್ರಿಗೆ ಉತ್ತೇಜನ ಸಿಗಲಿದೆ. ಭಾರತದಲ್ಲಿ ಮನೆಯಿಂದಲೇ ಕೆಲಸ ಮಾಡಲು ಸ್ನೇಹಪರ ಆಡಳಿತವನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!