ಐಟಿ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಂ ನೆಪದಲ್ಲಿ ಕತ್ತೆಗಳಂತೆ ದುಡಿಸಿಕೊಳ್ಳುವುದಕ್ಕೆ ಮುಂದಾಗಿರುವ ಐಟಿ ಕಂಪನಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಐಟಿ ವಲಯದಲ್ಲಿ ವರ್ಕ್ ಫ್ರಮ್ ಹೋಮ್ ಮಾಡಲು ಉದ್ಯೋಗಿಗಳಿಗೆ ಬೆಳಿಗ್ಗೆ 9 ರಿಂದ ರಾತ್ರಿ 10ರವರೆಗೆ ದುಡಿಸಿಕೊಳ್ಳುವುದು ಸರಿ ಅಲ್ಲ. ಬದಲಿಗೆ ಕೆಲಸದ ಸಮಯವನ್ನು ನಿಗದಿ ಮಾಡಲು ಕೇಂದ್ರ ಕಾರ್ಮಿಕ ಸಚಿವಾಲಯವು ನಿರ್ಧರಿಸಿದೆ.
ಕೈಗಾರಿಕಾ ಸಂಬಂಧಗಳ ಸಂಹಿತೆ 2020ರ 29ನೇ ಪರಿಚ್ಛೇದದ ಪ್ರಕಾರ ಕೇಂದ್ರ ಸರ್ಕಾರ ಉತ್ಪಾದನಾ ವಲಯ, ಗಣಿ ವಲಯ ಮತ್ತು ಸೇವಾ ವಲಯಗಳಿಗೆ ಮಾದರಿ ಆದೇಶಗಳನ್ನು ಪ್ರಕಟಿಸಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಸೇವಾ ವಲಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೇವಾ ವಲಯಕ್ಕೆ ಪ್ರತ್ಯೇಕ ಮಾದರಿ ಸ್ಟ್ಯಾಂಡಿಂಗ್ ಆರ್ಡರ್ ಗಳನ್ನು ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ ಎಂದು ಅದು ತಿಳಿಸಿದೆ.
ಕರಡು ಸ್ಥಾಯಿ ಆದೇಶಗಳ ಪ್ರಕಾರ, ವಲಯ-ನಿರ್ದಿಷ್ಟ ಅಗತ್ಯಗಳನ್ನು ಪರಿಗಣಿಸಿ ಕೆಲವು ಫ್ಲೆಕ್ಸಿಬಿಲಿಟಿಯನ್ನು ಒದಗಿಸುವಾಗ ಮೂರು ಮಾದರಿ ಸ್ಥಾಯಿ ಆದೇಶಗಳಲ್ಲಿ ಏಕರೂಪತೆ ಯನ್ನು ಕಾಯ್ದು ಕೊಳ್ಳಲಾಗಿದೆ.
ಮುಂದಿನ 30 ದಿನಗಳಲ್ಲಿ ಸಾರ್ವಜನಿಕ ಅಭಿಪ್ರಾಯಗಳಿಗೆ ಸರ್ಕಾರವು ಸ್ಥಾಯಿ ಆದೇಶಗಳನ್ನು ಹೊರಡಿಸಿದೆ.
ಗಣಿ ಕಾರ್ಮಿಕರಿಗೆ ರೈಲು ಪ್ರಯಾಣ ಸೌಲಭ್ಯ:
ಗಣಿ ಗಾರಿಕೆ ವಲಯದ ಕಾರ್ಮಿಕರಿಗೆ ರೈಲು ಪ್ರಯಾಣ ಸೌಲಭ್ಯ ವಿಸ್ತರಿಸಲಾಗಿದೆ. ಸದ್ಯ, ಕಲ್ಲಿದ್ದಲು ಗಣಿಗಳಲ್ಲಿ ಮಾತ್ರ ಕಾರ್ಮಿಕರು ಇದನ್ನು ಪಡೆಯುತ್ತಿದ್ದಾರೆ.
ಏ. 1 ರಿಂದ ಕಾರ್ಮಿಕ ಸಂಹಿತೆ ಜಾರಿ :
ಕೈಗಾರಿಕಾ ಸಂಬಂಧಗಳ ಸಂಹಿತೆಯು ಕಾರ್ಮಿಕ ಸಚಿವಾಲಯವು ನಿಯಮಗಳನ್ನು ಅಂತಿಮಗೊಳಿಸುವ ನಾಲ್ಕು ಕಾರ್ಮಿಕ ಸಂಹಿತೆಗಳಲ್ಲಿ ಒಂದಾಗಿದೆ. 29 ಕಾರ್ಮಿಕ ಕಾನೂನುಗಳನ್ನು ಒಳಗೊಂಡ ನಾಲ್ಕು ಮಸೂದೆಗಳನ್ನು 2021ರ ಏಪ್ರಿಲ್ 1ರಿಂದ ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ. ಇತರ ಮೂರು ಕೋಡ್ ಗಳೆಂದರೆ ಸಾಮಾಜಿಕ ಭದ್ರತೆಯ ಸಂಹಿತೆ, ವೇತನ ಸಂಹಿತೆ ಮತ್ತು ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಮೇಲಿನ ಸಂಹಿತೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.