December 24, 2024

Newsnap Kannada

The World at your finger tips!

ಪ್ರಿಯಕರನ

ಪ್ರಿಯಕರನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ – ಪ್ರಾಣಾಪಾಯದಿಂದ ಪಾರು

Spread the love

ತನ್ನನ್ನು ದೈಹಿಕವಾಗಿ ಬಳಕೆ ಮಾಡಿಕೊಂಡ ನಂತರ ವಿವಾಹವಾಗಲು ನಿರಾಕರಿಸಿದ ಪ್ರಿಯಕರನ ಮನೆಯಲ್ಲೇ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಂಜನಗೂಡಿನ ಕಂದೇಗಾಲದಲ್ಲಿ ಜರುಗಿದೆ.

ಕಾವ್ಯ ಎಂಬ ಯುವತಿ ಆತ್ಮಹತ್ಯೆ ಯತ್ನಿಸಿದವಳು. ಕಂದೇಗಾಲದ ತ್ಯಾಗರಾಜ್ ಎಂಬಾತನನ್ನು ಕಾವ್ಯ 4 ವರ್ಷಗಳಿಂದಲೂ ಪ್ರೀತಿಸುತ್ತಿದ್ದಳು.

ಇತ್ತೀಚೆಗೆ ತನ್ನ ಹುಟ್ಟಹಬ್ಬಕ್ಕೆ ಕಾವ್ಯ ಸೇರಿದಂತೆ ಇತರ ಸ್ನೇಹಿತರನ್ನು ಆಹ್ವಾನ ಮಾಡಿದ ತ್ಯಾಗರಾಜ್ ನಿಗೆ ಕಾರ್ಯಕ್ರಮದ ನಂತರ ಮದುವೆ ಮಾಡಿಕೊಳ್ಳುವಂತೆ ಕಾವ್ಯ ಕೇಳಿದಾಗ ಆತ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ

ಈ ಘಟನೆಯ ನಂತರ ಮನೆಯವರು ಕಾವ್ಯ ಮನೆಯವರು ಬೇರೆ ಹುಡುಗನೊಂದಿಗೆ ವಿವಾಹ ನಿಗದಿ ಮಾಡಿದರು. ಆಗ ನಿನ್ನನ್ನು ನಾನೇ ಮದುವೆ ಆಗುವೆ ಎಂಬ ಭರವಸೆಯನ್ನು ತ್ಯಾಗರಾಜ್ ನೀಡಿ ನಿಶ್ಚಯವಾಗುತ್ತಿದ್ದ ಮದುವೆಯನ್ನೂ ಆತ ತಪ್ಪಿಸಿ ಆಕೆಯೊಂದಿಗೆ ದೈಹಿಕ ಸಂಪಕ೯ ಬೆಳಸಿದ ನಂತರ ತ್ಯಾಗರಾಜ್ ಮತ್ತೆ ಕೈ ಕೊಟ್ಟನು

ಈ ಎಲ್ಲಾ ಬೆಳವಣಿಗೆಗಳಿಂದ ನೊಂದ ಯುವತಿ ಇಂದು ತ್ಯಾಗರಾಜನ ಮನೆಗೆ ತೆರಳಿ ವಿಷ ಸೇವಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಕಂದೇಗಾಲ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!