Trending

ಆಕ್ರಮಿತ ಭೂಭಾಗಗಳಲ್ಲಿ ಇಸ್ರೇಲ್ ವಸತಿ ಸಂಕೀರ್ಣ ಸ್ಥಾಪನೆ: ಯುರೋಪ್ ದೇಶಗಳ ಖಂಡನೆ

ಆಕ್ರಮಿತ ಭೂಭಾಗಗಳಲ್ಲಿ ಇಸ್ರೇಲ್ ವಸತಿ ಸಂಕೀರ್ಣ ಸ್ಥಾಪನೆ: ಯುರೋಪ್ ದೇಶಗಳ ಖಂಡನೆ

ಇಸ್ರೇಲ್ ತಾನು ಆಕ್ರಮಣ ಮಾಡಿರುವ ಫೆಲಿಸ್ತೇನ್ ಭೂಭಾಗದಲ್ಲಿ ಸಾವಿರಾರು ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಿರುವ ವಿಚಾರ ಯುರೋಪಿನ ಖಂಡನೆಗೆ ಒಳಗಾಗಿದೆ. ಇಸ್ರೇಲ್‌ನ ಈ ನಡೆಯನ್ನು ಯುರೋಪಿನ ದೇಶಗಳು‌ ವಿರೋಧ ಮಾಡಿವೆ.

ಇಸ್ರೇಲ್ ಆಕ್ರಮಣ ಮಾಡಿರುವ ಫಿಲಿಸ್ತೇನ್‌ನ ಪಶ್ಚಿಮ ದಂಡೆಯಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವುದನ್ನು ವಿರೋಧಿಸಿರುವ ಯುರೋಪ್‌ನ ಫ್ರಾನ್ಸ್, ಇಟಲಿ, ಜರ್ಮನ್, ಸ್ಪೇನ್ ಹಾಗೂ ಬ್ರಿಟನ್ ದೇಶಗಳು ‘ಆಕ್ರಮಿತ ಪ್ರದೇಶಗಳಲ್ಲಿ‌ ವಸತಿ ಪ್ರದೇಶಗಳನ್ನು ನಿರ್ಮಾಣ ಮಾಡ ಹೊರಟಿರುವ ಇಸ್ರೇಲ್‌ನ ಕ್ರಿಯೆ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘನೆ ಮಾಡುತ್ತದೆ. ಇಸ್ರೇಲ್ ಹಾಗೂ ಫೆಲಿಸ್ತೇನ್‌ನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಆಗಬಹುದಾದ ಎರಡು ದೇಶಗಳ ಸಂಭವನೀಯತೆಯನ್ನು ಇಸ್ರೇಲ್‌ನ ನಡೆ ಮೊಟಕುಗೊಳಿಸುವುದು’ ಎಂದು ಹೇಳಿವೆ.

‘ಇಸ್ರೇಲ್ ನಿರ್ಮಾಣ ಮಾಡಲಿಚ್ಛಿಸಿರುವ ಸುಮಾರು 3,000 ವಸತಿ ಸಂಕೀರ್ಣಗಳು, ಉಭಯ ದೇಶಗಳ ಶಾಂತಿ ಮಾತುಕತೆಯನ್ನು ಆರಂಭಿಸುವದಕ್ಕೆ ತಡೆಯೊಡ್ಡುತ್ತವೆ. ಈ ಅಭಿಪ್ರಾಯವನ್ನು ನಾವು ಇಸ್ರೇಲಿಗೆ ಹೇಳಿದ್ದೇವೆ’ ಎಂದು ಫ್ರಾನ್ಸ್, ಇಟಲಿ, ಜರ್ಮನ್, ಸ್ಪೇನ್ ಹಾಗೂ ಬ್ರಿಟನ್‌ಗಳ ವಿದೇಶಾಂಗ ಸಚಿವರು ತಿಳಿಸಿದ್ದಾರೆ.

ಈ ನಡುವೆ ಫೆಲಿಸ್ತೇನ್ ಅಧ್ಯಕ್ಷರ ವಕ್ತಾರ ನಬೀಲ್ ಅಬು ಅವರು ‘ಅಮೇರಿಕದ ಟ್ರಂಪ್ ಅವರ ಬೆಂಬಲದಿಂದ ಹಾಗೂ ಕೊಲ್ಲಿ ದೇಶಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡುತ್ತಿರುವ ಸಂದರ್ಭವನ್ನು ಇಸ್ರೇಲ್ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024