ಆಕ್ರಮಿತ ಭೂಭಾಗಗಳಲ್ಲಿ ಇಸ್ರೇಲ್ ವಸತಿ ಸಂಕೀರ್ಣ ಸ್ಥಾಪನೆ: ಯುರೋಪ್ ದೇಶಗಳ ಖಂಡನೆ
ಇಸ್ರೇಲ್ ತಾನು ಆಕ್ರಮಣ ಮಾಡಿರುವ ಫೆಲಿಸ್ತೇನ್ ಭೂಭಾಗದಲ್ಲಿ ಸಾವಿರಾರು ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಿರುವ ವಿಚಾರ ಯುರೋಪಿನ ಖಂಡನೆಗೆ ಒಳಗಾಗಿದೆ. ಇಸ್ರೇಲ್‌ನ ಈ ನಡೆಯನ್ನು ಯುರೋಪಿನ ದೇಶಗಳು ವಿರೋಧ ಮಾಡಿವೆ.
ಇಸ್ರೇಲ್ ಆಕ್ರಮಣ ಮಾಡಿರುವ ಫಿಲಿಸ್ತೇನ್‌ನ ಪಶ್ಚಿಮ ದಂಡೆಯಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿರುವುದನ್ನು ವಿರೋಧಿಸಿರುವ ಯುರೋಪ್‌ನ ಫ್ರಾನ್ಸ್, ಇಟಲಿ, ಜರ್ಮನ್, ಸ್ಪೇನ್ ಹಾಗೂ ಬ್ರಿಟನ್ ದೇಶಗಳು ‘ಆಕ್ರಮಿತ ಪ್ರದೇಶಗಳಲ್ಲಿ ವಸತಿ ಪ್ರದೇಶಗಳನ್ನು ನಿರ್ಮಾಣ ಮಾಡ ಹೊರಟಿರುವ ಇಸ್ರೇಲ್‌ನ ಕ್ರಿಯೆ ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘನೆ ಮಾಡುತ್ತದೆ. ಇಸ್ರೇಲ್ ಹಾಗೂ ಫೆಲಿಸ್ತೇನ್‌ನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಆಗಬಹುದಾದ ಎರಡು ದೇಶಗಳ ಸಂಭವನೀಯತೆಯನ್ನು ಇಸ್ರೇಲ್‌ನ ನಡೆ ಮೊಟಕುಗೊಳಿಸುವುದು’ ಎಂದು ಹೇಳಿವೆ.
‘ಇಸ್ರೇಲ್ ನಿರ್ಮಾಣ ಮಾಡಲಿಚ್ಛಿಸಿರುವ ಸುಮಾರು 3,000 ವಸತಿ ಸಂಕೀರ್ಣಗಳು, ಉಭಯ ದೇಶಗಳ ಶಾಂತಿ ಮಾತುಕತೆಯನ್ನು ಆರಂಭಿಸುವದಕ್ಕೆ ತಡೆಯೊಡ್ಡುತ್ತವೆ. ಈ ಅಭಿಪ್ರಾಯವನ್ನು ನಾವು ಇಸ್ರೇಲಿಗೆ ಹೇಳಿದ್ದೇವೆ’ ಎಂದು ಫ್ರಾನ್ಸ್, ಇಟಲಿ, ಜರ್ಮನ್, ಸ್ಪೇನ್ ಹಾಗೂ ಬ್ರಿಟನ್‌ಗಳ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಈ ನಡುವೆ ಫೆಲಿಸ್ತೇನ್ ಅಧ್ಯಕ್ಷರ ವಕ್ತಾರ ನಬೀಲ್ ಅಬು ಅವರು ‘ಅಮೇರಿಕದ ಟ್ರಂಪ್ ಅವರ ಬೆಂಬಲದಿಂದ ಹಾಗೂ ಕೊಲ್ಲಿ ದೇಶಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡುತ್ತಿರುವ ಸಂದರ್ಭವನ್ನು ಇಸ್ರೇಲ್ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದ್ದಾರೆ.

More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು