ಕೇರಳದ ಇಬ್ಬರು ಖದೀಮರು ಚಿನ್ನದ ಗಟ್ಟಿ ಸಾಗಿಸಲು ಬೇರೆ ಮಾರ್ಗವೇ ಇಲ್ಲದೇ ಒಳ ಉಡುಪಿನಲ್ಲಿ 2 ಕೆಜಿ 15 ಗ್ರಾಂ ಚಿನ್ನವನ್ನು ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ತಗಲು ಹಾಕಿಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.
ಒಳ ಉಡುಪಿನಲ್ಲಿ 1.08 ಕೋಟಿ ರೂ. ಮೌಲ್ಯದ 2.15 ಕೆ.ಜಿ ತೂಕದ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿ, ತಪಾಸಣೆ ಮಾಡಿದಾಗ ಈ ಅಕ್ರಮ ಬಯಲಿಗೆ ಬಂತು.
ಬಂಧಿತ ಆರೋಪಿಗಳು ಕೇರಳದ ಫೈಜಲ್ ತೊಟ್ಟಿ ಮತ್ತು ಮೊಹಮ್ಮದ್ ಶೋಹೈಬ್ ಎಂದು ಗೊತ್ತಾಗಿದೆ.
ಶಾರ್ಜಾದಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಾಗ ಸಂಶಯದ ಮೇಲೆ ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸುವಾಗ 24 ಕ್ಯಾರೆಟ್ 2.154 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಪೊಲೀಸರ ವಶದಲ್ಲಿದ್ದಾರೆ. ವಿಚಾರಣೆ ನಡೆಯುತ್ತದೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ನಂಬುಗೆಯೇ ಇಂಬು
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.