ಹಾಸನದ ಜೆಡಿಎಸ್ ಎಂಎಲ್ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ಸಂಕಷ್ಟ ಎದುರಾಗಿದೆ.
ಸೂರಜ್ ವಿರುದ್ಧ ನಾಮಪತ್ರ ಸಲ್ಲಿಕೆ ವೇಳೆ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ನೋಟಿಸ್ ಇಂದು ಜಾರಿ ಮಾಡಿದೆ.
ಮದುವೆ ಬಗ್ಗೆ ಮತ್ತು ಪತ್ನಿ ಮಾಹಿತಿಯನ್ನು ಸೂರಜ್ ಗೌಪ್ಯವಾಗಿಟ್ಟಿದ್ದಾರೆ. ಅವರ ಹೆಸರಿನಲ್ಲಿರೋ ಆಸ್ತಿಯ ಬಗ್ಗೆಯೂ ಮಾಹಿತಿ ನೀಡಿಲ್ಲ. ಮದುವೆ ಕಾಲಂನಲ್ಲಿ ನನಗೆ ಅನ್ವಯ ಇಲ್ಲ ಅಂತಾ ನಮೂದು ಮಾಡಿದ್ದಾರೆ ಎಂದು ದೂರಲಾಗಿತ್ತು .
ಕರೆಂಟ್ ಅಕೌಂಟ್ ಮಾಹಿತಿ ಮುಚ್ಚಿಟ್ಟಿದ್ದಾಗಿಯೂ ಆರೋಪ ಮಾಡಿರುವ ಹರೀಶ್ ಕೆ. ಎಲ್ ಎನ್ನುವವರು ಈ ಬಗ್ಗೆ ಹಾಸನ ಡಿಸಿಗೆ ದೂರು ನೀಡಿದರು. ಆದರೆ ಹಾಸನ ಜಿಲ್ಲಾಧಿಕಾರಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ .
ಡಿಸಿ ಗಿರೀಶ್ರಿಂದ ನಿಯಮ ಉಲ್ಲಂಘನೆ ಆರೋಪ ಮಾಡಿ ಸೂರಜ್ ನಾಮಿನೇಷನ್ ತಿರಸ್ಕರಿಸಲು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಸೂರಜ್ ರೇವಣ್ಣ, ಡಿಸಿ, ಚುನಾವಣಾ ಆಯೋಗಕ್ಕೆ ತುರ್ತು ನೋಟಿಸ್ ನೀಡಿ, ಅರ್ಜಿಯ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿದೆ.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
- ಮುಡಾ ಹಗರಣ: ಸ್ನೇಹಮಯಿ ಕೃಷ್ಣ ಮತ್ತು ಕೈ ಮುಖಂಡ ಲಕ್ಷ್ಮಣ್ ನಡುವೆ ವಾಗ್ವಾದ
More Stories
ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು