Main News

ಇರಾನ್‌: ವಿಶ್ವಸಂಸ್ಥೆಯಿಂದ ಶಸ್ತ್ರಾಸ್ತ್ರ ಖರೀದಿಗಿದ್ದ ನಿರ್ಬಂಧ ಮುಕ್ತಾಯ

ಇರಾನ್ ಮೇಲೆ ಶಸ್ತ್ರಾಸ್ತ್ರ ಖರೀದಿಗೆ ವಿಶ್ವಸಂಸ್ಥೆ ಹೇರಿದ್ದ 10 ವರ್ಷ ಕಾಲದ ನಿರ್ಬಂಧ ಇಂದಿಗೆ ಅಂತ್ಯವಾಗಿದೆ. ಇನ್ನು ಮುಂದೆ ಇರಾನ್ ಯುದ್ಧ ವಿಮಾನಗಳು, ಟ್ಯಾಂಕರ್‌ಗಳನ್ನು ಇತರೆ ದೇಶಗಳಿಂದ ಖರೀದಿಸಬಹುದಾಗಿದೆ.

ಇರಾನ್ ಪ್ರಪಂಚದ ಇತರೆ ದೇಶಗಳ ವಿರೋಧದ ನಡುವೆಯೂ ಅಣ್ವಸ್ತ್ರ ಪ್ರಯೋಗಗಳಿಗೆ ಮುಂದಾದ್ದರಿಂದ ವಿಶ್ವಸಂಸ್ಥೆಯು ಇರಾನ್ ಮೇಲೆ ಶಸ್ತ್ರಾಸ್ತ್ರ ‌ಖರೀದಿಸದಂತೆ 10 ವರ್ಷಗಳ ಕಾಲ ನಿರ್ಬಂಧ ಹೇರಿತ್ತು. ಅಲ್ಲದೇ ಅಮೇರಿಕಾ ಇರಾನ್ ಮೇಲೆ ಆರ್ಥಿಕ ದಿಗ್ಬಂಧನವನ್ನೂ ಹೇರಿತ್ತು.

ನಿರ್ಬಂಧ ತೆರವಾದ ಬಳಿಕ ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವದ್‌ ಜರೀಫ್‌ ‘ಇರಾನ್‌ನ ರಕ್ಷಣಾ ವ್ಯವಹಾರಗಳು ಈಗ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದಂತಾಗಿದೆ. ಇದು ಈ ಭಾಗದ ಭದ್ರತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಹುಪಕ್ಷೀಯ ಪ್ರಯತ್ನಕ್ಕೆ ಸಂದ ಜಯ’ ಎಂದು ಟ್ವೀಟ್‌ ಮಾಡಿದ್ದಾರೆ.

ನಿರ್ಬಂಧ ಕೊನೆಗೊಂಡ ನಂತರ, ಅಮೇರಿಕಾದ ರಕ್ಷಣಾ ಗುಪ್ತಚರ ಸಂಸ್ಥೆ, ಇರಾನ್ ಯುದ್ಧವಿಮಾನ ಪ್ರತಿರೋಧಿಸುವ ಕ್ಷಿಪಣಿ ವ್ಯವಸ್ಥೆ ಎಸ್‌–400, ರಷ್ಯಾದಿಂದ ಎಸ್‌ಯು–30 ಯುದ್ಧವಿಮಾನಗಳು, ಯಾಕ್‌–130 ತರಬೇತಿ ಯುದ್ಧವಿಮಾನಗಳು ಹಾಗೂ ಟಿ–90 ಟ್ಯಾಂಕ್‌ಗಳನ್ನು ಇರಾನ್‌ ಖರೀದಿಸುವ ಸಾಧ್ಯತೆ ಇದೆ ಹಾಗೂ ಚೀನಾದಿಂದಲೂ ಕೆಲವು ಶಸ್ತ್ರಾಸ್ತ್ರಗಳನ್ನು ಖರೀದಿಸಬಹುದು ಎಂದು ಅಂದಾಜು‌ ಮಾಡಿದೆ.

ಆದರೆ ಅಮೇರಿಕ ಹೇರಿದ್ದ ದಿಗ್ಬಂಧನದಿಂದ‌ ಇರಾನ್ ಸಾಕಷ್ಟು ಕಷ್ಟ ಅನುಭವಿಸಿತ್ತು. ಈಗ ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಿದರೆ ಎಲ್ಲಿ ಅಮೇರಿಕಾ ತನಗೂ ಆರ್ಥಿಕ ದಿಗ್ಬಂಧನ ಹೇರುವುದೋ ಎಂದು ಅನೇಕ ದೇಶಗಳು ಇರಾನ್‌ಗೆ ಶಸ್ತ್ರಾಸ್ತ್ರ ಪೂರೈಸಲು ಹಿಂದೆ ಮುಂದೆ‌ ನೋಡುತ್ತಿವೆ ಎನ್ನಲಾಗುತ್ತಿದೆ.

Team Newsnap
Leave a Comment
Share
Published by
Team Newsnap

Recent Posts

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಭೀಕರ ಹತ್ಯೆ

ಹುಬ್ಬಳ್ಳಿ : ಇಂದು ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿರುವ ಘಟನೆ… Read More

May 15, 2024

ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು : ಅಮಿತ್‌ ಶಾ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಬುಧವಾರ ಪಾಕ್ ಆಕ್ರಮಿತ ಕಾಶ್ಮೀರ (POK) ಮೇಲೆ ಭಾರತದ ಸಾರ್ವಭೌಮತ್ವವನ್ನು… Read More

May 15, 2024

ಪೆನ್ ಡ್ರೈವ್ ಕೇಸ್: ಹಾಸನದ 18 ಕಡೆಗಳಲ್ಲಿ ಎಸ್ ಐಟಿ ಶೋಧ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋ ಹೊಂದಿದ ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ… Read More

May 15, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 15 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,750 ರೂಪಾಯಿ ದಾಖಲಾಗಿದೆ. 24… Read More

May 15, 2024

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024