ಐಪಿಎಲ್ 20-20ಯ 31ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ತಂಡದ ವಿರುದ್ಧ ಅದ್ಭುತ 8 ವಿಕೆಟ್‌ಗಳ ವಿಜಯ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದ ಆಟವನ್ನು ಬ್ಯಾಟ್ಸ್‌ಮನ್‌ಗಳಾದ ಆರ್. ತ್ರಿಪಾಠಿ ಹಾಗೂ ಶುಭಮನ್ ಗಿಲ್ ಆರಂಭಿಸಿದರು. ಇವರ ಆಟ ಅಷ್ಟೇನೂ ಉತ್ಸಾಹದಾಯಕವಾಗಿರಲಿಲ್ಲ. ತ್ರಿಪಾಠಿ 7 (9 ಬಾಲ್‌ಗಳಿಗೆ) ಹಾಗೂ ಶುಭಮನ್ ಗಿಲ್ 21 (23 ಬಾಲ್‌ಗಳಿಗೆ) ರನ್ ಗಳಿಕೆ ಮಾಡಲಷ್ಟೇ ಶಕ್ತರಾದರು. ಇವರ ನಂತರ ಬಂದ ಇ. ಮಾರ್ಗನ್ ಹಾಗೂ ಪಿ. ಕಮ್ಮಿನ್ಸ್ ಅವರು ಕ್ರಮವಾಗಿ 39 ರನ್ ಹಾಗೂ 53 ರನ್ ಗಳಿಸಿ ತಂಡದ ರಕ್ಷಣೆಗೆ ಮುಂದಾದರಾದರೂ ತಂಡ ಪಂದ್ಯದಲ್ಲಿ ಪರಾಭವಗೊಳ್ಳಲೇ ಬೇಕಾಯಿತು. ಕೆಕೆಆರ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿಲಷ್ಟೇ ಶಕ್ತವಾಯಿತು.
ಕೆಕೆಆರ್ ನೀಡಿದ ಸಾಧಾರಣ ಗುರಿಯನ್ನು ಎಮ್‌ಐ ತಂಡ ತುಂಬಾ ಸರಳವಾಗಿ ಮುಟ್ಟಿತು. ಎಮ್‌ಐ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ರೋಹಿತ್ ಶರ್ಮಾ ಹಾಗೂ ಕ್ಲಿಂಟನ್ ಡಿ ಕಾಕ್ ಅದ್ಭುತ ಆರಂಭವನ್ನೇ ನೀಡಿದರು. ಆಟ ಆಕರ್ಷಕವಾಗಿರುವಾಗಲೇ ರೋಹಿತ್ 36 ಎಸೆತಗಳಿಗೆ 35 ರನ್ ಗಳಿಕೆ ಮಾಡಿ ಶಿವಮ್ ಮಾವಿಯವರ ಬೌಲಿಂಗ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಕ್ ಅವರು. ಕಾಕ್ 44 ಎಸೆತಗಳಿಗೆ 78 ರನ್ ಗಳಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯ ಕೆಲವು ಓವರ್‌ಗಳಲ್ಲಿ ಇವರಿಗೆ ಹೆಚ್. ಪಾಂಡ್ಯ (11 ಎಸೆತಗಳಿಗೆ 21) ಉತ್ತಮ ಸಾಥ್ ನೀಡಿದರು. ಎಮ್‌ಐ ತಂಡ 16.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಪಂದ್ಯದಲ್ಲಿ ಜಯಶಾಲಿಯಾಯಿತು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು