February 22, 2026

Newsnap Kannada

The World at your finger tips!

rcb vs csk

ಇಂದಿನಿಂದ ಐಪಿಎಲ್​ ಹಬ್ – ಉದ್ಘಾಟನಾ ಪಂದ್ಯಕ್ಕೆ ಎಂ ಐ-ಆರ್ ಸಿಬಿ ನಡುವೆ ಮೊದಲ ಪಂದ್ಯ

Spread the love

ಭಾರಿ ಕೊರೋನಾ ಆತಂಕ ನಡುವೆಯೂ ಕ್ರಿಕೆಟ್​ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಐಪಿಎಲ್‌ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ.

ಇಂದಿನಿಂದ ಐಪಿಎಲ್‌ ಹಬ್ ಆರಂಭ. ಐಪಿಎಲ್‌ನ 14ನೇ ಆವೃತ್ತಿಯ ಮೊದಲ ಪಂದ್ಯ ಶುಕ್ರವಾರ ಸಂಜೆ ಚೆನ್ನೈನ ಎಂ.ಎ ಚಿದಂಬರಮ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಾದಾಡಲಿವೆ.

ಈ ಬಾರಿ ಕೊರೋನಾ ಕಾರಣದಿಂದ ಖಾಲಿ ಮೈದಾನದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ.  6 ನಗರಗಳಲ್ಲಿ 8 ತಂಡಗಳ ನಡುವೆ ಚುಟುಕು ಕದನ ನಡೆಯಲಿದೆ.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗುತ್ತಿರೋದು ವಿಶೇಷವಾಗಿದೆ.

ಮೊದಲ ಪಂದ್ಯದಲ್ಲಿ ಜಯಭೇರಿ ಯೊಂದಿಗೆ 14ನೇ ಆವೃತ್ತಿಯನ್ನು ಭರ್ಜರಿಯಾಗಿ ಪ್ರಾರಂಭಿಸಲು ಉಭಯ ತಂಡಗಳು ಸನ್ನದ್ಧವಾಗಿದೆ.

error: Content is protected !!