ಐಪಿಎಲ್ 20-20 ರ 13ನೇ ಸರಣಿಯ 14ನೇ ದಿನದ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿಜಯ ಸಾಧಿಸಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಬ್ಯಾಟಿಂಗ್ ಆಯ್ದು ಮೈದಾನಕ್ಕಿಳಿದ ಎಸ್‌ಆರ್‌ಹೆಚ್ ತಂಡದ ನಾಯಕ ಡಿ ವಾರ್ನರ್ ಅವರು 28 ರನ್ ಗಳಿಸಿದರು. ಆದರೆ ತಂಡದ ಉಪನಾಯಕ ಜೆ. ಬೇರ್ಸ್ಟೋವ್ ಕೇವಲ 0 ರನ್‌ಗಳಿಗೆ ಪೆವಿಲಿಯನ್ ಸೇರಿದರು. ನಂತರ ಬಂದ ಪಿ. ಗರ್ಗ್ ಅವರ ಬ್ಯಾಟಿಂಗ್ ತಂಡದ ಉತ್ಸಾಹವನ್ನು ಇಮ್ಮಡಿಸಿತು. 26 ಬಾಲ್‌ಗಳಲ್ಲಿ 51 ರನ್‌ಗಳಿಸಿ ತಂಡಕ್ಕೆ ಬಹುದೊಡ್ಡ ಆಸರೆಯಾದರು. ಹೈದರಾಬಾದ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದರು.
ಚೆನ್ನೈ ಸತತ ಮೂರನೇ ಬಾರಿ ಸೋಲು ಕಾಣುತ್ತಿರುವ ಪಂದ್ಯ ಇದಾಗಿದೆ. ಅಷ್ಟೇನೂ ದೊಡ್ಡ ಮೊತ್ತವಲ್ಲದ ಗುರಿಯನ್ನು ಚೆನ್ನೈ ಬೆನ್ನು ಹತ್ತಿದರೂ ಸಹ ಸೋಲು ಕಾಣಬೇಕಾಯಿತು. ಮಹೇಂದ್ರ ಸಿಂಗ್ ಧೋನಿ 47 (36) ರನ್ ಹಾಗೂ ರವೀಂದ್ರ ಜಡೇಜಾ 50 (35) ರನ್ ಗಳಿಸಿ ತಂಡಕ್ಕೆ ಬಲ ತುಂಬುವ ಪ್ರಯತ್ನ ಮಾಡಿದರಾದರೂ ಅದು ಸಾಧ್ಯವಾಗಲಿಲ್ಲ. ಚೆನ್ನೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಮಾತ್ರ ಗಳಿಸಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ