ಕೊರೋನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಾವಳಿಗಳು ಇಂದಿನಿಂದ ಪ್ರಾರಂಭಗೊಳ್ಳಲಿವೆ.
ಐಪಿಎಲ್ ಪ್ರಾರಂಭಕ್ಕೆ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐಪಿಎಲ್ ನ ೧೩ ನೇ ಸೀಸನ್ ಗೆ ಅರಬ್ ದೇಶದಲ್ಲಿ ಇಂದು ಚಾಲನೆಯಲ್ಲಿ ದೊರೆಯಲಿದೆ, ಅಲ್ ಶೇಕ್ ಝಹೇದ್ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಪ್ರಾರಂಭವಾಗಲಿದೆ. ಇವತ್ತು, ರೋಹಿತ್ ಶರ್ಮಾ ನೇತೃತ್ವದ ಹಾಗೂ ಹಾಲಿ ಚಾಂಪಿಯನ್, ಮುಂಬೈ ಇಂಡಿಯನ್ಸ್ ತಂಡ ಹಾಗೂ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಮನೆ ಮಾಡಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ, ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ಡುಪ್ಲೆಸಿ, ಕೇದಾರ್ ಜಾಧವ್, ಜಡೇಜಾ, ಚಾವ್ಲಾ, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹೀರ್,ಋತುರಾಜ್ ಗಾಯ್ಕವಾಡ್, ಜಗದೀಶನ್, ಕರ್ಣ ಶರ್ಮಾ ಮುಂತಾದವರು ಆಡಲಿದ್ದಾರೆ,
ರೋಹಿತ್ ಶರ್ಮಾ ನೇತೃತ್ವದ ತಂಡ ಮುಂಬೈ ಇಂಡಿಯನ್ಸ್ ತಂಡದಲ್ಲಿ, ಕ್ವಿಂಟನ್ ಡಿಕಾಕ್, ಆದಿತ್ಯ ತಾರೆ ದೇಶಮುಖ, ಸೌರಭ್ ತಿವಾರಿ, ಜಸ್ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಪೊಲಾರ್ಡ್, ಚಾಹರ್ ಮುಂತಾದವರು ಆಡಲಿದ್ದಾರೆ.
ಮುಂದಿನ ೫೩ ದಿನಗಳ ಕಾಲ ಐಪಿಎಲ್ ಪಂದ್ಯಾವಳಿಯು, ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು