ಐಪಿಎಲ್ 20-20ಯ 59ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡದ ವಿರುದ್ಧ 17 ರನ್‌ಗಳ ಅದ್ಭುತ ವಿಜಯ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಸಿ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿ ತಂಡದಿಂದ ಆರಂಭಿಕ ಆಟಗಾರರಾಗಿ ಎಂ. ಸ್ಟೋಯಿನೀಸ್ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದು ಅದ್ಭುತ ಪ್ರದರ್ಶನವನ್ನು ತೋರಿದರು. ಸ್ಟೋಯಿನೀಸ್ 27 ಬಾಲ್‌ಗಳಿಗೆ 38 ರನ್ ಹಾಗೂ ಧವನ್ 50 ಬಾಲ್‌ಗಳಿಗೆ 78 ರನ್ ಗಳಿಸಿದರು. ನಂತರ ಬಂದ ಹೆಟ್ಮಿಯರ್ ಅವರ ಬ್ಯಾಟಿಂಗ್ ತಂಡದ ಮೊತ್ತ ಪೇರುವಲ್ಲಿ ಸಹಾಯಕವಾಯಿತು. ಹೆಟ್ಮಿಯರ್ 22 ಬಾಲ್‌ಗಳಿಗೆ 42 ರನ್ ಗಳಿಸಿದರು. ಡಿಸಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 189 ರನ್‌ಗಳನ್ನು ಗಳಿಕೆ ಮಾಡಿತು.
ಎಸ್‌ಆರ್‌ಹೆಚ್ ತಂಡದಿಂದ ಸ್ಕ್ರೀಸ್‌ಗೆ ಬಂದ ಪಿ. ಗರ್ಗ್ ಹಾಗೂ ಡಿ. ವಾರ್ನರ್ ಸಾಧಾರಣ ಆಟ ಪ್ರಾರಂಭ ಮಾಡಿದರು. ಗರ್ಗ್ 12 ಬಾಲ್‌ಗಳಿಗೆ 17 ರನ್ ಗಳಿಸಿದರೆ, ವಾರ್ನರ್ 3 ಬಾಲ್‌ಗಳಿಗೆ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಬಂದ ಮನೀಶ್ ಪಾಂಡೆ ಹಾಗೂ ಕೆ. ವಿಲಿಯಮ್ಸನ್ ಉತ್ತಮ ಪ್ರದರ್ಶನ ನೀಡಿದರೂ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಾಂಡೆ 14 ಬಾಲ್‌ಗಳಿಗೆ 21 ರನ್ ಗಳಿಸಿದರೆ, ವಿಲಿಯಮ್ಸನ್ 45 ಎಸೆತಗಳಿಗೆ 67 ರನ್ ಗಳಿಸಿದರು. ತರುವಾಯ ಬಂದ ಎ. ಸಮದ್ 16 ಬಾಲ್‌ಗಳಿಗೆ 33 ರನ್‌ಗಳ ಮಿಂಚಿನಾಟ ಆಡಿದರೂ ತಂಡಕ್ಕೆ ಸಹಾಯಕವಾಗಲಿಲ್ಲ. ಎಸ್‌ಆರ್‌ಹೆಚ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಗರಿ ಧರಿಸಿತು.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು