ಐಪಿಎಲ್ 20-20ಯ ಫೈನಲ್ಸ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ, ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.
ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡಿಸಿ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಡಿಸಿ ತಂಡದಿಂದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಎಂ. ಸ್ಟೋಯಿನೀಸ್ ಹಾಗೂ ಶಿಖರ್ ಧವನ್ ಅವರ ಜೋಡಿಯಾಟ ತೀರ ಕಳಪೆಯಾಗಿತ್ತು. ಸ್ಟೋಯಿನೀಸ್ ಶೂನ್ಯ ಸಂಪಾದನೆಗೆ ಪೆವಿಲಿಯನ್ ಸೇರಿದರೆ, ಧವನ್ 13 ಬಾಲ್‌ಗಳಿಗೆ 15 ರನ್ ಗಳಿಸಿದರು. ನಂತರ ಬಂದ ಎಸ್. ಐಯ್ಯರ್ ಹಾಗೂ ಆರ್. ಪಂತ್ ಅವರಯ ಜೋಡಿಯಾಟದಲ್ಲಿ ಉತ್ತಮ ರನ್ ಗಳಿಸಿದರೂ ತಂಡವನ್ನು ಸೋಲಿನ ದವಡೆಯಿಂದ ಕಾಪಾಡಲಾಗಲಿಲ್ಲ. ಐಯ್ಯರ್ 50 ಎಸೆತಗಳಿಗೆ 65 ರನ್ ಹಾಗೂ ಪಂತ್ 38 ಎಸೆತಗಳಿಗೆ 56 ರನ್ ಗಳಿಸಿದರು. ಡಿಸಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್‌ಗಳನ್ನು ಗಳಿಕೆ ಮಾಡಿತು.
ಎಮ್‌ಐ ತಂಡದಿಂದ ಸ್ಕ್ರೀಸ್‌ಗೆ ಬಂದ ರೋಹಿತ್ ಶರ್ಮಾ ಹಾಗೂ ಡಿ. ಕಾಕ್ ಉತ್ತಮ ಜೊತೆಯಾಟ ಆರಂಭಿಸಿದರು. ಶರ್ಮಾ 51 ಎಸೆತಗಳಿಗೆ 68 ರನ್ ಹಾಗೂ ಕಾಕ್ 12 ಎಸೆತಗಳಿಗೆ 20 ರನ್ ಗಳಿಸಿದರು. ನಂತರ ಬಂದ ಐ. ಕಿಶನ್ 19 ಎಸೆತಗಳಿಗೆ 33 ರನ್ ಗಳಿಸಿದರು. ಎಮ್‌ಐ ತಂಡ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಪಂದ್ಯದಲ್ಲಿ ಐಪಿಎಲ್ 2020ರ 13ನೇ ಸರಣಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ