ಆಕೆ 3 ತಿಂಗಳ ಹಿಂದಷ್ಟೇ ಫೇಸ್ ಬುಕ್ ನಲ್ಲಿ ಪರಿಚಯವಾದವಳು. ಬೇರೆ ಹುಡುಗಿಯ ಫೋಟೊ ತೋರಿಸಿ 50 ವರ್ಷದ ಮಹಿಳೆ, ನಾಗಮಂಗಲದ ಯುವಕನಿಗೆ ಯಾಮಾರಿಸಿದ ಸ್ಟೋರಿ ಇದು. ಹೆಸರು ಕಮಲ,ಈಕೆ ತುಮಕೂರಿನ ಗುಬ್ಬಿ ತಾಲೂಕು ಮಲ್ಲಸಂದ್ರ ಗ್ರಾಮದ ಆಶಾ ಎಂದು ಪರಿಚಯ ಮಾಡಿಕೊಂಡಿದ್ದಾಳೆ.
ಈ ಯುವಕ ಹಾಗೂ ಯುವತಿ ನಡುವೆ ಸುದೀರ್ಘ ದಿನ ಮಾತುಕತೆ ನಡೆದ ನಂತರ ಆ ಸ್ನೇಹ , ಸಲುಗೆ ಪ್ರೀತಿಗೆ ತಿರುಗಿದೆ. ತನ್ನ ಮನೆಯ ಕಷ್ಟ ಹೇಳಿಕೊಂಡ ಆ ಯುವತಿ ಯುವಕನಿಂದ 3.50 ಲಕ್ಷ ರು ಹಾಗೂ 30 ಸಾವಿರ ರು ದಿನಸಿ ತರಿಸಿಕೊಂಡಿದ್ದಾಳೆ. ಇದೇ ವೇಳೆ ನಾವಿಬ್ಬರೂ ಮದುವೆ ಆಗೋಣ ಎಂದು ಯುವಕ ಪ್ರಸ್ತಾಪ ಇಟ್ಟಾಗ ನಾನು ಆಶಾಳ ದೊಡ್ಡಮ್ಮ. ಆಕೆಗೆ ಅಪ್ಪ – ಅಮ್ಮ ಇಲ್ಲ. ನಾನೇ ಮದುವೆ ಮಾಡಿಸಬೇಕು ಎಂದು ಆ ಮಹಿಳೆಯೇ ಯುವಕನ ಮನೆಗೆ ಬಂದು ಮದುವೆ ಒಪ್ಪಂದ ಮಾಡಿಕೊಂಡು ಚಪ್ಪರ ಶಾಸ್ತ್ರದ ದಿನವೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ಆಕೆ ಹೇಳಿದ್ದಾಳೆ.
ಇತ್ತ ಯುವಕನ ಮನೆಯವರು ಮದುವೆ ಆಹ್ವಾನ ಪತ್ರಿಕೆ ಹಂಚಿದ್ದಾರೆ . ಮೇ 20 ರಂದು ಆದಿಚುಂಚನಗಿರಿಯಲ್ಲಿ ಮದುವೆ ಸಿದ್ದತೆ ಮಾಡಲಾಗಿತ್ತು. ಆದರೆ ಮದುವೆ ಚಪ್ಪರಕ್ಕೆ ವಧು ಹಾಗೂ ಆಕೆಯ ದೊಡ್ಡಮ್ಮ ಎಂದು ಹೇಳಿಕೊಂಡ ಆಶಾ (50) ಬರಲಿಲ್ಲ. ಕೊನೆಗೆ ಯುವಕನ ಗ್ರಾಮಕ್ಕೆ ಆಗಮಿಸಿದ ದೊಡ್ಡಮ್ಮ ಆಶಾ ಮಾವಂದಿರು ಆಕೆಯನ್ನು ಬಚ್ಚಿ ಇಟ್ಟಿದ್ದಾರೆಂದು ಹೇಳಿದಳು.
ಇದನ್ನು ಓದಿ : ಪೋಲಿಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ ಇಬ್ಬರು ಯುವಕರ ಸಾವು
ಈಕೆಯ ಹೇಳಿಕೆ ಬಗ್ಗೆ ಅನುಮಾನಗೊಂಡ ಯುವಕನ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದರು.ಪೋಲಿಸರ ವಿಚಾರಣೆಯ ವೇಳೆ ತಾನು ಯುವತಿಯಂತೆ ಬಣ್ಣ ಬಣ್ಣದ ಮಾತನಾಡಿ ಸೆಳೆದುಕೊಂಡೆ. ನಾನು ಹೇಳಿರುವುದೆಲ್ಲವೂ ಸುಳ್ಳು. ಪಡೆದುಕೊಂಡಿರುವ ಎಲ್ಲಾ ಹಣವನ್ನು ವಾಪಸ್ ಕೊಡುವೆ ಎಂದು ಮುಚ್ಚಳಿಕೆ ಬರೆದುಕೊಟ್ಟು ಬಚಾವ್ ಆಗಿದ್ದಾಳೆ.
- KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
- BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
- ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ: ಈಶ್ವರ್ ಖಂಡ್ರೆ ಸ್ಪಷ್ಟನೆ
- ಭೂಕಂಪದ : ಟಿಬೆಟ್-ನೇಪಾಳ ಗಡಿಯಲ್ಲಿ 32 ಮಂದಿ ಸಾವು, 38 ಮಂದಿ ಗಾಯ
- ಭಾರತೀಯ ವಾಯುಪಡೆ: ಏರ್ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ
BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ
ಮದ್ಯ ಕುಡಿಸಿ ಯುವತಿಯ ಮೇಲೆ ಅತ್ಯಾಚಾರ – ಬಿಜೆಪಿ ಮುಖಂಡನ ವಿರುದ್ಧ FIR ದಾಖಲು