Editorial

ಅಂತಾರಾಷ್ಟೀಯ ಕಾಫಿ ದಿನ

ಕಾಫಿಗಾಗಿಯೇ ಒಂದು ದಿನ, ಇಂದು ಅಂದರೆ ಅಕ್ಟೋಬರ್ ಒಂದನೇ ತಾರೀಖು ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತಿದೆ. ೨೦೧೪ರಿಂದ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆಯು ಈ ದಿನದ ಆಚರಣೆಯನ್ನು ಆರಂಭಿಸಿತು. ಮೊಟ್ಟ ಮೊದಲ ಬಾರಿಗೆ ೨೦೧೫ರ ಅಕ್ಟೋಬರ್ ಒಂದನೇ ತಾರೀಖಿನಂದು ಕಾಫಿ ದಿನವನ್ನು ಆಚರಿಸಲಾಯಿತು. ಕಾಫಿ ಪೇಯದ ಗುಣಗಳನ್ನು ಅದರ ಉಪಯುಕ್ತತೆಯ ಜೊತೆಗೆ ಕಾಫಿ ಬೀಜದ ವ್ಯಾಪಾರವನ್ನು ವೃದ್ಧಿಗೊಳಿಸುವುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿ ಸೆಪ್ಟೆಂಬರ್ ೨೯ನ್ನು ರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಅಂತಾರಾಷ್ಟ್ರೀಯವಾಗಿ ಅಕ್ಟೋಬರ್ 1ನೇ ತಾರೀಖು ಕಾಫಿ ಡೇ ಆಗಿದೆ.

2024ರ ಕಾಫಿ ಡೇ ಘೋಷ ವಾಕ್ಯ “ಸಹಯೋಗ” ಎಂದಾಗಿದೆ. ಈ ವರ್ಷ ಅಂತಾರಾಷ್ಟ್ರೀಯ ಸಹಕಾರಿ ವರ್ಷ ಆಗಿರುವುದರಿಂದ ಕಾಫಿ ಬೆಳೆಗಾರರು, ಮಾರಾಟಗಾರರು ಹಾಗೂ ಖರೀದಿ ಮಾಡುವವರಲ್ಲಿ ಸಹಯೋಗ ಹಾಗೂ ಸಹಕಾರವಿರಲಿ ಎನ್ನುವುದೇ ಉದ್ದೇಶವಾಗಿದೆ.

ಕಾಫಿ ಭಾರತೀಯ ಪೇಯವಲ್ಲ ಎಂಬುದು ನಂಬಿಕೆ ೭ನೇ ಶತಮಾನದಲ್ಲಿ ಬಾಬಾ ಬುಡನ್‌ಗಿರಿಯಲ್ಲಿ ಮೊದಲ ಬಾರಿಗೆ ಕಾಫಿ ಬೀಜವನ್ನು ಯೆಮೆನ್‌ನಿಂದ ತರಲಾಗಿದೆ ಎಂಬ ನಂಬಿಕೆ. ಆದರೆ ಕಪಿ ಬೀಜ ಕಾಫಿ ಬೀಜ ಎಂದು ಕೂಡ ಹೇಳಲಾಗುತ್ತದೆ. ಭಾರತದಲ್ಲಿ ಕೊಡಗನ್ನು ಕಾಫಿಯ ರಾಜಧಾನಿ ಅಥವಾ ಕಣಜ ಎನ್ನಲಾಗುತ್ತದೆ. ಕಾಫಿಗೆ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದಿರುವುದು ಬ್ರೆಜಿಲ್. ಭಾರತದಲ್ಲಿ ಕರ್ನಾಟಕವು ಕಾಫಿ ಉತ್ಪಾದನೆಯಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ. ದೇಶದ ೭೧% ಕಾಫಿ ಉತ್ಪಾದನೆಯನ್ನು ಕರ್ನಾಟಕವು ಮಾಡುತ್ತಲಿದೆ. ದಕ್ಷಿಣ ಭಾರತದ ಪ್ರಸಿದ್ಧ ಪೇಯ ಕಾಫಿಯಾಗಿದೆ. ಈಗ ಉತ್ತರ ಭಾರತೀಯರು ಕೂಡ ಕಾಫಿಯನ್ನು ಸೇವಿಸುವುದನ್ನು ಕಲಿತಿದ್ದಾರೆ. ಚಿಕ್ಕಮಗಳೂರನ್ನು ಕಾಫಿ ನಗರ ಎನ್ನಲಾಗುತ್ತದೆ. ಕಾಫಿಯಲ್ಲಿ ನಾಲ್ಕು ವಿಧಗಳಿವೆ. ಅರೆಬಿಕಾ, ರೋಬೋಸ್ಟಾ, ಲಿಬರಿಕಾ ಮತ್ತು ಎಕ್ಸೆಲ್ಸಾ ಎಂದಾಗಿದೆ. ಒಟ್ಟು ೩೦ ತರದ ಕಾಫೀಯನ್ನು ವಿಶ್ವದಲ್ಲಿ ನೋಡುತ್ತೇವೆ. ಕಾಫಿಯನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಫಿಲ್ಟರ್ ಕಾಫಿ, ಕಾಫಿ ಫಿಲ್ಟರ್‌ನಲ್ಲಿ ಡಿಕಾಕ್ಟನ್ ಹಾಕಿ ಕಾಫಿ ಮಡುವುದು, ಒಂದು ಪಾತ್ರೆಯಲ್ಲಿ ಕಾಫಿ ಪುಡಿಯನ್ನು ಕಾಕಿ ಅದರ ಮೇಲೆ ಎಸರು ಬಂದಿರುವ ನೀರನ್ನು ಹಾಕಿ ಪಾತ್ರ ಸ್ವಲ್ಪ ಹೊತ್ತು ತಟ್ಟೆ ಮುಚ್ಚಿಟ್ಟು ಶುಭ್ರವಾದ ಬಟ್ಟೆಯಲ್ಲಿ ಸೋಸುವುದು, ಇನ್‌ಸ್ಟಂಟ್ ಪುಡಿಯನ್ನು ಬೆರೆಸಿ ಕಾಫಿ ಮಾಡುವುದು. ಬೆಲ್ಲದ ಕಾಫಿ, ಬ್ಲಾಕ್ ಕಾಫಿ ಮೊದಲಾದ ಬಗೆಯ ಕಾಫಿಯನ್ನು ಸೇವಿಸಬಹುದು. ೧೯೯೬ರಲ್ಲಿ ವಿ. ಜಿ ಸಿದ್ಧಾರ್ಥ ಕಾಫಿ ಡೇ ಎಂಬ ಕಾಫೀ ಪುಡಿಯನ್ನು ಮಾರುವ ಮತ್ತು ಕಾಫಿ ಪೇಯದ ವಿವಿಧ ಬಗೆಯ ಪದಾರ್ಥಗಳನ್ನು ಮಾಡುವ ಕೆಫೆಯನ್ನು ಆರಂಭಿಸಿದರು. ಇದರಿಂದ ಕಾಫಿ ಮಾರಾಟ ಮತ್ತು ಕುಡಿಯುವವರು ಹಾಗೂ ಕಾರ್ಪೋರೇಟ್ ಮೀಟಿಂಗ್‌ಗಳ, ಪ್ರೇಮಿಗಳ ಭೇಟಿಯ ತಾಣವಾಗಿ ಯುವ ಜನರ ಆಕರ್ಷಣೆಯ ಸ್ಥಳವಾಗಿ ರೂಪುಗೊಂಡಿತು. ಪ್ರಸ್ತುತವಾಗಿ ಸ್ಟಾರ್‌ಬುಕ್ಸ್ ಕಾಫಿಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ಸಸ್ಟಂಟ್ ಕಾಫಿ ಹೃದಯಕ್ಕೆ ಹಾನಿಕರ ಎಂದು ಹೇಳಲಾಗುತ್ತದೆ.

ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್‌ ಇದ್ದದು ಅದರ ಜೊತೆಗೆ ಇನ್ನು ಅನೇಕ ಪೋಷಕಾಂಶಗಳಿದ್ದು ಅಂತರಿಕ ಸೋಂಕನ್ನು ಕಡಿಮೆ ಮಾಡುವ ಮತ್ತು ಅನೇಕ ರೀತಿಯ ರೋಗಗಳೊಂದಿಗೆ ಹೋರಾಡುವ ಗುಣವನ್ನು ಹೊಂದಿದೆ. ಕಾಫಿ ಬೀಜದ ರೂಪದಲ್ಲಿ ದೊರೆಯುತ್ತದೆ ಅದನ್ನು ಪುಡಿ ಮಾಡಿ ಹದವಾಗಿ ಚಕೋರಿಯನ್ನು ಕೂಡ ಸೇರಿಸಿ ಮಾರಾಟ ಮಡಲಾಗುತ್ತದೆ.

ಕಾಫಿ ಸೇವನೆ ದೇಹದಲ್ಲಿ ಚೈತನ್ಯವನ್ನು ಉತ್ಪತ್ತಿ ಮಾಡಿ ಕೆಲಸಕಾರ್ಯಗಳನ್ನು ಚುರುಕಾಗಿ ಮಾಡುವಲ್ಲಿ ಸಹಾಯಕವಾಗಿದೆ. ಕಾಫಿ ಸೇವನೆಯು ತೂಕವನ್ನು ಇಳಿಸುವಲ್ಲಿ ಸಹಾಯಕ,ಕಾಫಿ ಸೇವನೆಯಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಕಾಫಿ ಸೇವನೆಯಿಂದ ಟೈಪ್‌ 2 ಮಧುಮೇಹದ ಅಪಾಯವನ್ನು ಕೂಡ ಕಡಿಮೆ ಮಾಡಬಹುದಾಗಿದೆ ಎಂದು ಹೇಳುತ್ತಾರೆ. ಕಾಫಿ ಸೇವನೆಯಿಂದ ಖಿನ್ನತೆ, ಪಾರ್ಕಿನ್‌ಸನ್‌ ಮತ್ತು ಅಲಜಮೈರ್‌ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಾಯಕ ಎಂದು ಅಧ್ಯಯನಗಳು ಹೇಳುತ್ತವೆ. ಬಹಳ ದಿನ ಬರುವ ಯಕೃತ್ತಿನ ಕಾಯಿಲೆ ಆಥವಾ ಯಕೃತ್ತಿನ ಕಾಯಿಲೆಗಳಿಂದ ದೇಹವನ್ನು ಕಾಫಿ ಕಾಪಾಡುತ್ತದೆ. ಮನುಷ್ಯನ ಆಯುಷ್ಯವನ್ನು ಕಾಫಿ ಹೆಚ್ಚಿಸುತ್ತದೆ ಎಂದು ಅಧ್ಯಯನಗಳಲ್ಲಿ ಹೇಳಲಾಗಿದೆ. ಕ್ರೀಡಾಪಟುಗಳಲ್ಲಿ ಅವರ ಕ್ಷಮತೆ ಹೆಚ್ಚಿಸಲು ಸಹಾಯಕವೆಂದು ಹೇಳುತ್ತಾರೆ. ಕಾಫಿ ಸೇವನೆಯಿಂದ ಡಿಎನ್ ಎ ಸಧೃಡವಾಗುತ್ತದೆ. ಕೋಲೆಕ್ಟರಾಲ್ ಅಂದರೆ ಗುದದ್ವಾರದ ಕ್ಯಾನ್ಸರ್ ತಡೆಯುತ್ತದೆ. ಹೆಣ್ಣುಮಕ್ಕಳಲ್ಲಿ ಉಂಟಾಗ ಬಹುದಾದ ಪಾರ್ಶ್ವವಾಯು ತಡೆಯುವಲ್ಲಿ ಸಹಾಯಕ. ಚರ್ಮಗಳಲ್ಲಿ ಉಂಟಾಗುವ ಗಂಟನ್ನು ಕಡಿಮೆ ಮಾಡುತ್ತದೆ.

ಕಾಫಿ ಪುಡಿಯನ್ನು ಮುಖದ ಕಾಂತಿಯನ್ನು ಹೆಚ್ಚಿಸಲು , ಬೆಳ್ಳಗಿನ ಬಣ್ಣವನ್ನು ಪಡೆಯಲು ಹಾಗೂ ಕ್ಲೆನ್ಸರ್‌ ಆಗಿ ಕೂಡ ಬಳಸಲಾಗುತ್ತದೆ. ಕಾಫಿ ಪುಡಿಯನ್ನು ಬಳೆಸಲಾಗುತ್ತದೆ. ಕೂದಲನ್ನು ಕಪ್ಪಾಗಿಸಲು ಆಯುರ್ವೇದ, ನೈಸರ್ಗಿಕ ಡೈ ತಯಾರಿಸಲು ಕೂಡ ಕಾಫಿ ಪುಡಿಯನ್ನು ಬಳಸಲಾಗುತ್ತದೆ. ಈ ರೀತಿಯಲ್ಲಿ ಸೌಂದರ್ಯವರ್ಧಕವಾಗಿಯೂ ಕಾಫಿ ಪುಡಿಯು ಉಪಯುಕ್ತವಾಗಿದೆ.

ಸಾಕಷ್ಟು ಲಾಭಗಳಿದ್ದರೂ ಕೂಡ ಅಪಾಯಗಳಿಗೂ ಕಡಿಮೆ ಇಲ್ಲ. ಯಾರೆಲ್ಲ ಅತೀ ಕಾಫಿ ಸೇವನೆಯನ್ನು ಮಾಡುತ್ತಾರೆಯೋ ಅವರಿಗೆ ಮೂಳೆಗಳು ಪ್ರಾಕ್ಚರ್‌ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಇನ್ನು ಕೆಲವರಿಗೆ ಕಾಫಿ ಸೇವನೆಯಿಂದ ಗ್ಯಾಸ್‌ನಿಂದ ಆಗುವ ತೊಂದರೆಗಳು ಹೆಚ್ಚಾಗಿ ತೊಂದರೆ ಕೊಡುತ್ತವೆ. ಗರ್ಭಿಣಿ ಸ್ತ್ರೀಯರಲ್ಲೂ ಬೇರೆ ಬೇರೆ ರೀತಿಯ ಸಮಸ್ಯೆಗೆ ಕಾರಣವಾಗಬಹುದು ಅತೀ ಹೆಚ್ಚು ಕಾಫಿ ಸೇವನೆಯಿಂದ ಮಾನಸಿಕ ಸಮಸ್ಯೆಗಳು ಖಿನ್ನತೆ ಹೆಚ್ಚಾಘುವ ಸಂಭವವೂ ಇದೆ. ರಕ್ತದೊತ್ತಡವನ್ನು ಕೂಡ ಹೆಚ್ಚು ಮಾಡುತ್ತದೆ. ಎದೆಯುರಿಯುಂಟಾಗಬಹುದು, ಮೊಲೆಯುಣಿಸುವ ತಾಯಿಯರು ಹೆಚ್ಚು ಕಾಫಿ ಸೇವನೆಯಿಂದ ಮಕ್ಕಳಿಗೂ ಸಮಸ್ಯೆಯುಂಟಾಗುವ ಸಾಧ್ಯತೆ ಇದೆ.
ಸಾಮಾನ್ಯ ಜನರು ದಿನದಲ್ಲಿ 2 ರಿಂದ 5ಬಾರಿ ಕಾಫಿ ಸೇವನೆ ಮಾಡುತ್ತಾರೆ. ಇದನ್ನು ಅತೀ ಸೇವನೆ ಎಂದು ಭಾವಿಸಲಾಗುವುದಿಲ್ಲ ಆದರೆ ಇದಕ್ಕೂ ಹೆಚ್ಚು ಸೇವನೆ ಒಳ್ಳೆಯದಲ್ಲ. ಒಟ್ಟಾರೆ ದಿನದಲ್ಲಿ 400ಮಿಲಿ ಗ್ರಾಂ ಕೇಫೈನ್ ಸೇವಿಸಬಹುದು.ಇದನ್ನು ಓದಿ –ಜೀವನದ ಸಂಜೆಯ ಸುತ್ತ

ಏನೇ ಇರಲಿ ದಿನದ ಮುಂಜಾನೆ ಕಾಫಿಯಿಂದ ಆದರೆ ಮನಸ್ಸಿಗೆ ಅಹ್ಲಾದ. ಕಾಫಿ ದಿನವನ್ನು ಮನೆಯಲ್ಲಿ ಕಾಫಿ ಮಾಡಿ ಕುಡಿಯುವುದು ಮಾತ್ರವಲ್ಲದೆ ಸ್ನೇಹಿತರೊಂದಿಗೆ ವಿಶೇಷ ಕಾಫಿ ದೊರೆಯುವಲ್ಲಿ ಕೂಡ ಹೋಗಿ ಕುಡಿಯಬಹುದು.

ಮಾಧುರಿ ದೇಶಪಾಂಡೆ, ಬೆಂಗಳೂರು

Team Newsnap
Leave a Comment

Recent Posts

CM ಸಿದ್ದರಾಮಯ್ಯ: ಮೈಸೂರಿನಲ್ಲಿ ‘ರಾಮೋಜಿ ಫಿಲ್ಮ್ ಸಿಟಿ’ ಮಾದರಿಯಲ್ಲಿ ಹೊಸ ಚಿತ್ರನಗರಿ ನಿರ್ಮಾಣ

ಮೈಸೂರು: ಮೈಸೂರಿನಲ್ಲಿ 'ರಾಮೋಜಿ ಫಿಲ್ಮ್ ಸಿಟಿ' ಮಾದರಿಯಲ್ಲಿ ಹೊಸ ಚಿತ್ರನಗರಿ ನಿರ್ಮಾಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇಮ್ಮಾವು… Read More

October 1, 2024

ನಾಳೆ ನಡೆಯುವ ಸೂರ್ಯ ಗ್ರಹಣ: ತಪ್ಪಿಸಬೇಕು ಎನ್ನುವ ಚಟುವಟಿಕೆಗಳ ಬಗ್ಗೆ ಮಾಹಿತಿ

ಸೂರ್ಯಗ್ರಹಣ ನೈಸರ್ಗಿಕ ಘಟನೆಯಾಗಿದ್ದರೂ, ಹಿಂದೂ ಧರ್ಮದಲ್ಲಿ ಇದಕ್ಕೆ ವಿಶೇಷ ಮಹತ್ವ ಇದೆ. ಈ ವೇಳೆ ಕೆಲ ಆಚರಣೆಗಳು ಮತ್ತು ಸಂಪ್ರದಾಯಗಳು… Read More

October 1, 2024

ನಟ ಗೋವಿಂದ ಕಾಲಿಗೆ ಗುಂಡು ತಗುಲಿ, ಆಸ್ಪತ್ರೆಗೆ ದಾಖಲು

ಮುಂಬೈ: ಇಂದು ಬೆಳಿಗ್ಗೆ ಬಾಲಿವುಡ್ ನಟ ಗೋವಿಂದ ಅವರ ಮನೆಯಲ್ಲಿ ಕಾಲಿಗೆ ಗುಂಡು ತಗುಲುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈ ಪೊಲೀಸರು… Read More

October 1, 2024

ಪತ್ನಿಯ ನಿರ್ಧಾರದಿಂದ ಸಿಎಂ ಸಿದ್ದರಾಮಯ್ಯ ಆಶ್ಚರ್ಯ: “ರಾಜಕೀಯ ಷಡ್ಯಂತ್ರದಿಂದ ಕಂಗಾಲು “

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಚಲನೆಗಳಿಂದ ತೀವ್ರ ಪರಿಣಾಮಕ್ಕೆ ಒಳಗಾದ ಪತ್ನಿ ಪಾರ್ವತಿ, 14 ಸೈಟ್‌ಗಳನ್ನು… Read More

October 1, 2024

ಜೀವನದ ಸಂಜೆಯ ಸುತ್ತ

ಹಿರಿಯ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನ ಪಾಲಕರು ಹಳ್ಳಿಯ ತಮ್ಮ ಹಳೆಯ ಮನೆಯಲ್ಲಿ ಮಕ್ಕಳ ಬರುವಿಕೆಗೆ, ಒ೦ದು ಫೋನ್ ಕರೆಗೆ, ಪತ್ರಕ್ಕೆ… Read More

October 1, 2024

14 ಮುಡಾ ನಿವೇಶನಗಳ ಕ್ರಯಪತ್ರ ವಾಪಸ್ : ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಪಾರ್ವತಿ ಪತ್ರ – ಸ್ಪೋಟಕ ತಿರುವು

ಬೆಂಗಳೂರು :ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಡಿ ಸಂಕಷ್ಟ ಎದುರಾಗಿದೆ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಇಸಿಐಆರ್… Read More

September 30, 2024