December 27, 2024

Newsnap Kannada

The World at your finger tips!

WhatsApp Image 2022 03 29 at 9.56.24 AM

ಧರ್ಮ ಯುದ್ಧ ಅಂತ್ಯಕ್ಕೆ ಬುದ್ಧಿಜೀವಿಗಳ ಮನವಿ : 61 ಸಾಹಿತಿಗಳಿಂದ ಸಿಎಂಗೆ ಪತ್ರ

Spread the love

ರಾಜ್ಯದಲ್ಲಿ ಧರ್ಮ ಸಂಘರ್ಷದ ಯುದ್ಧದ ಅಂತ್ಯಕ್ಕೆ ಬುದ್ಧಿಜೀವಿಗಳು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಮುಸ್ಲಿಂ ವರ್ತಕರಿಗೆ ಬ್ಯಾನ್ ಸರಿಯಲ್ಲ. ಸಮವಸ್ತ್ರದೊಂದಿಗೆ ಹಿಜಬ್‍ಗೂ ಅವಕಾಶ ಕೊಡಿ ಎಂದು ಹೇಳುವ ಮೂಲಕ ಧರ್ಮ ಸಂಘರ್ಷಕ್ಕೆ ಇತಿಶ್ರೀ ಹಾಡಲು ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಲಾಗಿದೆ.

61 ಸಾಹಿತಿಗಳಿಂದ ಸಿಎಂ ಬೊಮ್ಮಾಯಿಗೆ ಮೂರು ಮುಖ್ಯ ಅಂಶಗಳನ್ನೊಳಗೊಂಡ ಪತ್ರ ಬರೆಯಲಾಗಿದೆ.

ಡಾ.ಕೆ.ಮರುಳ ಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ರೆಹಮತ್ ತರಿಕೆರೆ ಸೇರಿ ಒಟ್ಟು 61 ಸಾಹಿತಿಗಳು ಮನವಿ ಮಾಡಿಕೊಂಡಿದ್ದಾರೆ.

ಪತ್ರದಲ್ಲಿನ ಪ್ರಮುಖ ಅಂಶಗಳು :

ಶಾಂತಿಯ ನೆಲದಲ್ಲಿ ಮತಾಂಧತೆ, ಕೋಮುವಾದ ಅಟ್ಟಹಾಸ ಮೆರೆಯುತ್ತಿದೆ.

ಪಠ್ಯದಲ್ಲಿ ಭಗವದ್ಗೀತೆಗಿಂತ ಸಂವಿಧಾನವನ್ನು ಓದುವುದು ಅತ್ಯಗತ್ಯ.

ಸಮವಸ್ತ್ರದ ಭಾಗವಾಗಿಯೇ ಶಿರವಸ್ತ್ರ ಧರಿಸಿ ಪರೀಕ್ಷೆಗೆ ಅನುಮತಿಸಿ. ಸದ್ಯ ಇರುವ ವಸ್ತ್ರಸಂಹಿತೆ ಸುತ್ತೋಲೆ ಅವೈಜ್ಞಾನಿಕ, ಹಿಂತೆಗೆದುಕೊಳ್ಳಿ.

ಸಾಮರಸ್ಯದ ತಾಣಗಳು ವಿವಾದದ ಕೇಂದ್ರಬಿಂದುಗಳಾಗಿದೆ. ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ.

ಸಾಮರಸ್ಯ ಹಾಳು ಮಾಡ್ತಿರುವವರ ವಿರುದ್ಧ ನಿದ್ರಾಕ್ಷಿಣ್ಯ ಕ್ರಮ ಕೈಗೊಳ್ಳಿ.

ರಾಜ್ಯಾದ್ಯಂತ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ ಸರಿಯಲ್ಲ. ಎಲ್ಲ ಜಾತ್ರೆ, ಉತ್ಸವಗಳು ಮುಸ್ಲಿಂ ಬಂಧುಗಳಿಲ್ಲದೇ ಸಂಪನ್ನವಾಗಲ್ಲ. ಒಂದು ಧರ್ಮದ, ಜಾತಿಯ ಉತ್ಸವಗಳಾಗಿ ಜಾತ್ರೆ ನಡೆಯಲ್ಲ. ಸಾಮರಸ್ಯದ ನಾಡಿನಲ್ಲಿ ಮುಸ್ಲಿಂ ವರ್ತಕರ ಬಹಿಷ್ಕಾರ ಅಸಂವಿಧಾನಿಕ ನಡೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!