December 20, 2024

Newsnap Kannada

The World at your finger tips!

JUNMONY ROBHA

ಭಾವಿ ಪತಿಯನ್ನೇ ಬಂಧಿಸಿದ್ದ ಲೇಡಿ ಸಿಂಗಂ ವಂಚನೆ ಪ್ರಕರಣದಲ್ಲಿ ಬಂಧನ

Spread the love

ವಂಚನೆ ಕೇಸ್​​ನಲ್ಲಿ ಭಾವಿ ಪತಿಯನ್ನೇ ಬಂಧಿಸಿ ಫೇಮಸ್ ಆಗಿದ್ದ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್
ಜುನ್ಮೋನಿ ರಾಭಾ ಅವರನ್ನು ಅದೇ ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ.

ಒಎನ್‌ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ಕೆಲಸ ನೀಡುವ ಭರವಸೆ ನೀಡಿ ಕೆಲವರಿಗೆ ಪೊಲೀಸ್​ ಅಧಿಕಾರಿಯ ಪ್ರಿಯಕರ ವಂಚಿಸಿದ್ದಾರೆ ಎಂದು ದೂರು ನೀಡಲಾಗಿತ್ತು.

ಈ ಲೇಡಿ ಅಧಿಕಾರಿಯೇ ಪ್ರಿಯಕರನ ಅರೆಸ್ಟ್ ಮಾಡಿದ ನಂತರ ಈಕೆಯನ್ನು ಲೇಡಿ ಸಿಂಗಂ ಅಂತಲೇ ಕರೆಯಲಾಗಿತ್ತು. ಇದನ್ನು ಓದಿ – ಅತ್ಯಾಚಾರ ಕೇಸ್ : ಕೈಲಾಸದಲ್ಲಿದ್ದರೂ ನಿತ್ಯಾನಂದನನ್ನು ಬಂಧಿಸಿ ಕರೆ ತನ್ನಿ – ರಾಮನಗರ ಜಿಲ್ಲಾ ಕೋರ್ಟ್

ಸತತ ಎರಡು ದಿನಗಳ ವಿಚಾರಣೆಯ ನಂತರ ಈಗ ಇದೇ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜುನ್ಮೋನಿ ರಾಭಾ ಅವರನ್ನು ಮಜೌಲಿನಲ್ಲಿ ಶನಿವಾರ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. 

ಮಜುಲಿ ಜಿಲ್ಲೆಯ ನ್ಯಾಯಾಲಯ ರಾಭಾಗೆ 14 ದಿನಗಳ ನ್ಯಾಯಾಂಗ ಬಂಧನ ಒಳಪಡಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!