ರಾಜ್ಯದ ಏಳು ಜಿಲ್ಲೆಗಳು ಮೂರು ಹಂತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿವೆ.
2021-22 ಕ್ಕೆ ಮೊದಲ ಹಂತಹ ಜಿಲ್ಲೆಗಳ ಯೋಜನೆ ಪೂರ್ಣಗೊಳ್ಳಬೇಕಿದೆ. ಈವರೆಗೂ ಬಿಡುಗಡೆಯಾದ ಹಣ, ಕಾಮಗಾರಿ ಮುಗಿಯಬೇಕಾದ ಕಾಲಮಿತಿ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಏಳು ಜಿಲ್ಲೆಗಳು ಆಯ್ಕೆಯಾಗಿವೆ. ಮೊದಲ ಹಂತದಲ್ಲಿ ಬೆಳಗಾವಿ, ದಾವಣಗೆರೆ, ಎರಡನೇ ಹಂತದಲ್ಲಿ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಹಾಗೂ ಮೂರನೇ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿವೆ.
ಮೂರು ಹಂತಗಳಲ್ಲಿ ಆಯ್ಕೆಯಾಗಿರುವ ಎಲ್ಲ ಏಳು ಜಿಲ್ಲೆಗಳಲ್ಲಿಯೂ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರಗತಿಯಲ್ಲಿವೆ. ಐದು ವರ್ಷದ ಯೋಜನಾ ಅವಧಿಯಲ್ಲಿ ಪ್ರತಿ ಜಿಲ್ಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ 500 ಕೋಟಿಯಂತೆ ಸಾವಿರ ಕೋಟಿ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗಲಿದೆ.
ಬಿಡುಗಡೆಯಾದ ಅನುದಾನ :
- ಬೆಳಗಾವಿ ಜಿಲ್ಲೆಗೆ ಕೇಂದ್ರದಿಂದ 294 ಕೋಟಿ. ರಾಜ್ಯದಿಂದ 200 ಕೋಟಿ ರೂ. ಸೇರಿ ಒಟ್ಟು 494 ಕೋಟಿ ರು ಬಿಡುಗಡೆ
- ದಾವಣಗೆರೆ ಜಿಲ್ಲೆಗೆ ಕೇಂದ್ರದಿಂದ 196 ಕೋಟಿ ರು. ರಾಜ್ಯದಿಂದ 200 ಕೋಟಿ ರೂ. ಸೇರಿ ಒಟ್ಟು 396 ಕೋಟಿ ರು. ಬಿಡುಗಡೆ
- ಹುಬ್ಬಳ್ಳಿ – ಧಾರವಾಡ ಜಿಲ್ಲೆಗೆ ಕೇಂದ್ರದಿಂದ 196 ಕೋಟಿ ರು. ರಾಜ್ಯದಿಂದ 190 ಕೋಟಿ ರೂ. ಸೇರಿ ಒಟ್ಟು 386 ಕೋಟಿ ರು.
ಬಿಡುಗಡೆ - ಮಂಗಳೂರು (ದಕ್ಷಿಣ ಕನ್ನಡ ) ಜಿಲ್ಲೆಗೆ ಕೇಂದ್ರದಿಂದ 190 ಕೋಟಿ ರು. ರಾಜ್ಯದಿಂದ 148 ಕೋಟಿ ರು. ಸೇರಿ ಒಟ್ಟು 338 ಕೋಟಿ ರೂ. ಬಿಡುಗಡೆ
- ಶಿವಮೊಗ್ಗ ಜಿಲ್ಲೆಗೆ ಕೇಂದ್ರದಿಂದ 196 ಕೋಟಿ ರೂ. ರಾಜ್ಯದಿಂದ 111 ಕೋಟಿ ರೂ. ಸೇರಿ ಒಟ್ಟು 307 ಕೋಟಿ ರು. ಬಿಡುಗಡೆ
- ತುಮಕೂರು ಜಿಲ್ಲೆಗೆ ಕೇಂದ್ರದಿಂದ 294 ಕೋಟಿ, ರಾಜ್ಯದಿಂದ 111 ಕೋಟಿ ರೂ. ಸೇರಿ ಒಟ್ಟು 405 ಕೋಟಿ ರೂ. ಬಿಡುಗಡೆ
- ಬೆಂಗಳೂರು ನಗರ ಜಿಲ್ಲೆಗೆ ಕೇಂದ್ರದಿಂದ 155 ಕೋಟಿ ರೂ. ರಾಜ್ಯದಿಂದ 55 ಕೋಟಿ ರೂ. ಸೇರಿ ಒಟ್ಟು 210 ಕೋಟಿ ರೂ. ಬಿಡುಗಡೆ
- ಏಳು ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ 1,521 ಕೋಟಿ ರೂ. ರಾಜ್ಯದಿಂದ 1,015 ಕೋಟಿ ರೂ. ಸೇರಿ ಒಟ್ಟು 2536 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ.
ಯೋಜನೆಯ ಕಾಲ ಮಿತಿ :
ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಬೆಳಗಾವಿ, ದಾವಣಗೆರೆ ಜಿಲ್ಲೆಗಳ ಯೋಜನೆಗಳು 2021-22 ಕ್ಕೆ ಮುಕ್ತಾಯ
ಎರಡನೇ ಹಂತದಲ್ಲಿ ಆಯ್ಕೆಯಾದ ಹುಬ್ಬಳ್ಳಿ- ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಯೋಜನೆಗಳು 2022-23 ಕ್ಕೆ ಮುಕ್ತಾಯ
ಮೂರನೇ ಹಂತದಲ್ಲಿ ಬೆಂಗಳೂರು ನಗರ ಜಿಲ್ಲೆಯ ಯೋಜನೆಗಳು 2023-24 ಕ್ಕೆ ಮುಕ್ತಾಯದ ಗುರಿ ನಿಗದಿಪಡಿಸಲಾಗಿದೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ