ಇಂಡೋನೇಷ್ಯಾ ವಿಮಾನ ನಾಪತ್ತೆ : ಅವಶೇಷಗಳು ಪತ್ತೆ – ದುರಂತ ಸಾಧ್ಯತೆ?

Team Newsnap
1 Min Read

2021 ರ ಮೊದಲ ವಾರವೇ ಇಂಡೋನೇಷ್ಯಾದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್ 737-500 ವಿಮಾನ ಕೆಲ ಹೊತ್ತನಲ್ಲೇ ರೆಡಾರ್ ಸಂಪರ್ಕ ಕಡಿತಗೊಂಡ ನಂತರ ವಿಮಾನ‌ ಪತ್ತೆಗಾಗಿ ನಡೆಸಿದ ಶೋಧನಾ ಕಾರ್ಯದಲ್ಲಿ ಅವಶೇಷಗಳು ಸಿಕ್ಕಿವೆ

ವಿಮಾನ ಸಂಪರ್ಕ ಕಡಿತಗೊಂಡ
ತಕ್ಷಣವೇ ಶೋಧ ಕಾರ್ಯ ಆರಂಭಿಸಿದ ತಂಡಕ್ಕೆ ಇದೀಗ ವಿಮಾನದ ಅವಶೇಷಗಳು ಪತ್ತೆಯಾಗಿದೆ.

ಆದರೆ ಇದು ನಾಪತ್ತೆಯಾದ ವಿವಾಮದ ಅವಶೇಷ ಹೌದು ಅಥವಾ ಅಲ್ಲವೇ ಎಂಬುದು ಇನ್ನು ಖಚಿತವಾಗಿಲ್ಲ.

ನಾಪತ್ತೆಯಾದ ವಿಮಾನದಲ್ಲಿ
ಒಟ್ಟು 62 ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 1.56ಕ್ಕೆ ವಿಮಾನ ಜಕಾರ್ತದಿಂದ ಟೇಕ್ ಆಫ್ ಆಗಿತ್ತು. ಪಶ್ಚಿಮ ಕಲಿಮಾಂಟಾನ್‌ನ ಪೊಂಟಿಯಾನಕ್‌ಗೆ ತೆರಳುತ್ತಿದ್ದ ಬೋಯಿಂಗ್ 737-500 ವಿಮಾನ 2.30ರ ವೇಳೆಗೆ ನಾಪತ್ತೆಯಾಗಿದೆ.

ರೆಡಾರ್ ಸಂಪರ್ಕ ಕಳೆದುಕೊಂಡ ವಿಮಾನ ಪತ್ತೆ ವಿಶೇಷ ತಂಡ ಕಾರ್ಯಚರಣೆ ನಡೆಸಿದ ನಂತರ
ಅವಶೇಷಗಳು ಪತ್ತೆಯಾಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಬೇಕಿದೆ.

ಪ್ರಾಥಮಿಕ ಮಾಹಿತಿ ಯಂತೆ
10 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರಾಡುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆಯಿಂದ ರೆಡಾರ್ ಸಂಪರ್ಕ ಕಡಿತಗೊಂಡಿದೆ. 10 ಮಕ್ಕಳು ಸೇರಿದಂತೆ 56 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸುತ್ತಿದೆ. ಇಂಡೋನೇಷ್ಯಾ ವಿಮಾನ ನಾಪತ್ತೆ ಕುರಿತು ತನಿಖೆಗೆ ಆದೇಶಿಸಿದೆ.

Share This Article
Leave a comment