February 22, 2026

Newsnap Kannada

The World at your finger tips!

indigo

ಇಂಡಿಗೋ ವಿಮಾನದಲ್ಲಿ ತುಳುವಿನಲ್ಲಿ ಪ್ರಕಟಣೆ – ಕರಾವಳಿಗರ ಮನಗೆದ್ದ ಪೈಲಟ್

Spread the love

ತುಳು ಭಾಷೆ ವಿಮಾನದಲ್ಲಿ ಮಾರ್ದನಿಸಿದೆ. ಅದೂ ಕೂಡ ವಿಮಾನದ ಪೈಲಟ್ ಬಾಯಲ್ಲಿ. ಇದೀಗ ಪೈಲಟ್‍ನ ತುಳು ಪ್ರಕಟಣೆಯ ವೀಡಿಯೋ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.‌

ಇಂಡಿಗೋ ವಿಮಾನ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮುಂಬೈನಿಂದ ಮಂಗಳೂರಿಗೆ ಹೊರಟಿತ್ತು. ಈ ವೇಳೆ ಪೈಲಟ್ ಇಂಗ್ಲಿಷ್ ಬದಲಿಗೆ ತುಳುವಿನಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದಾರೆ.

ವಿಮಾನದಲ್ಲಿ ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ರಾಜ್ಯ ಭಾಷೆಯಲ್ಲಿ ಮಾತ್ರ ವಿಮಾನ ಹೊರಡುವಾಗ ಮತ್ತು ಇಳಿಯುವಾಗ ಪ್ರಯಾಣಿಕರಿಗೆ ಸೂಚನೆ ರವಾನಿಸುವ ಪದ್ಧತಿ ಇದೆ. ಈ ನಡುವೆ ಮುಂಬೈನಿಂದ ಮಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ಕರಾವಳಿ ಕರ್ನಾಟಕದ ಜನ ಹೆಚ್ಚಿರುವುದನ್ನು ಗಮನಿಸಿದ ಪೈಲಟ್ ‘ಮಾತೆರೆಗ್ಲಾ ಸೊಲ್ಮೆಲು’ ಎನ್ನುತ್ತಾ ತುಳುವಿನಲ್ಲಿ ಮಾತು ಆರಂಭಿಸಿ ಅಗತ್ಯ ಸೂಚನೆಯನ್ನು ನೀಡಿದ್ದಾರೆ.

ಈ ವೀಡಿಯೋ ಇದೀಗ ಕರಾವಳಿಯಾದ್ಯಂತ ಗಮನಸೆಳೆಯುತ್ತಿದೆ.
ವಿಮಾನದಲ್ಲಿ ತುಳುವಿನಲ್ಲಿ ಅನೌನ್ಸ್‌ಮೆಂಟ್ ಮಾಡಿದ ಪೈಲಟ್ ಪ್ರದೀಪ್ ಪದ್ಮಶಾಲಿ ಮೂಲತಃ ಉಡುಪಿಯವರು ಮುಂಬೈನಲ್ಲಿ ಪೈಲಟ್ ವೃತ್ತಿ ನಿರ್ವಹಿಸುತ್ತಿದ್ದಾರೆ. ಇಂಡಿಗೋ ವಿಮಾನ ಪ್ರತಿದಿನ ಮುಂಬೈನಿಂದ ರಾತ್ರಿ 8 ಗಂಟೆಗೆ ಹೊರಡಿ ಮಂಗಳೂರಿಗೆ 9:30ಕ್ಕೆ ಮಂಗಳೂರಿಗೆ ತಲುಪುತ್ತದೆ. ಈ ವಿಮಾನ ಶುಕ್ರವಾರ ಹೊರಡುತ್ತಿದ್ದಂತೆ ಪ್ರದೀಪ್ ತಮ್ಮ ತುಳು ಭಾಷಾ ಪ್ರೇಮ ಮೆರೆದು ತುಳುವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

error: Content is protected !!