December 22, 2024

Newsnap Kannada

The World at your finger tips!

self marriage

kshama bindu

ತನ್ನನ್ನು ತಾನೇ ಮದುವೆಯಾಗುವ ಯುವತಿ ಗೋವಾದಲ್ಲಿ ಹನಿಮೂನ್ ಅಂತೆ!

Spread the love

24 ವರ್ಷದ ಯುವತಿ ಇದೇ ಮೊದಲ ಬಾರಿಗೆ ತನ್ನನ್ನು ತಾನೇ ಜೂನ್ 11 ರಂದು ಮದುವೆ ಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

ಹೌದು, ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ, ತನ್ನನ್ನು ತಾನೇ ವಿವಾಹವಾಗುತ್ತಿದ್ದಾಳೆ. ಅಲ್ಲದೇ ಮದುವೆಯ ಎಲ್ಲ ವಿಧಿ-ವಿಧಾನಗಳ ನಂತರ ಗೋವಾಗೆ ಹನಿಮೂನ್‍ಗೆ ಹಾರಲಿದ್ದಾಳೆ.

ಇದನ್ನು ಓದಿ – ಮಂಡ್ಯದ ಕೆಂಪೇಗೌಡ ಬಡಾವಣೆಯಲ್ಲಿ ದುರಂತ : 1 ವರ್ಷದ ಮಗು ಕಣ್ಣೆದುರೆ ನೇಣಿಗೆ ಶರಣಾದ ತಾಯಿ

ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಷಮಾ, ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೂ ಈ ರೀತಿ ಯಾರಾದರೂ ಮದುವೆಯಾಗಿದ್ದಾರಾ ಎಂದು ಪರಿಶೀಲಿಸಿದೆ. ಬಹುಶಃ ಈ ರೀತಿ ಮದುವೆಯಾಗುತ್ತಿರುವ ಮೊದಲ ವ್ಯಕ್ತಿ ನಾನಾಗೀರಬಹುದು. ನಾನು ಎಂದಿಗೂ ಮದುವೆಯಾಗುವುದಕ್ಕೆ ಬಯಸಿಲ್ಲ. ಆದರ ವಧು ಆಗಬೇಕೆಂಬ ಆಸೆ ಇತ್ತು. ಹೀಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ.

ಸ್ವಯಂ-ವಿವಾಹವು ನಿಮಗೆ ನೀವೇ ಮಾಡಿಕೊಳ್ಳುವ ಕಮಿಟ್‍ಮೆಂಟ್ ಆಗಿದೆ ಮತ್ತು ನಿಮಗೆ ನೀವೇ ನೀಡುವ ಅಪಾರವಾದ ಪ್ರೀತಿಯುಳ್ಳದಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಆಗಿದೆ. ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಇದನ್ನು ಓದಿ – CET, NEET, JEE, ಪರೀಕ್ಷೆ ಬರೆಯುವ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ – ಸಿಎಂ ಬೊಮ್ಮಾಯಿ

self marriage
kshama bindu

ಗೋವಾದಲ್ಲಿ 2 ವಾರ ಹನಿ ಮೂನ್

ಈ ಮದುವೆಗೆ ತನ್ನ ಪೋಷಕರು ಒಪ್ಪಿಗೆ ಸೂಚಿಸಿ, ಮದುವೆ ಸಿದ್ಧತೆ ನಡೆಸುವಂತೆ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ನಡೆಯಲಿರುವ ವಿವಾಹಕ್ಕೆ ಕ್ಷಮಾ ಐದು ವ್ರತಗಳನ್ನು ಮದುವೆಯಾದ ಬಳಿಕ ಎರಡು ವಾರಗಳ ಕಾಲ ಹನಿಮೂನ್‍ಗೆ ಗೋವಾಕ್ಕೆ ಹೋಗಲಿದ್ದಾಳೆ.

ಕಲ್ಪನೆ ಎಲ್ಲಿಂದ ಹುಟ್ಟುತು

ಪ್ರತಿಯೊಬ್ಬ ಮಹಿಳೆ ವಧುವಾಗಲು ಬಯಸುತ್ತಾಳೆ ಆದರೆ ಹೆಂಡತಿಯಾಗಬಾರದು ಎಂದು ವೆಬ್ ಸರಣಿಯಲ್ಲಿ ನಟಿಯೊಬ್ಬರು ಹೇಳುವುದನ್ನು ಕೇಳಿದ್ದೇನೆ ಎಂದು ಕ್ಷಮಾ ಹೇಳುತ್ತಾರೆ. “ಮತ್ತು, ಅದರ ನಂತರ, ನನ್ನನ್ನೇ ಮದುವೆಯಾಗುವ ನನ್ನ ಆಲೋಚನೆಗಳು ಮತ್ತೆ ಹೊತ್ತಿಕೊಂಡವು,” ಕ್ಷಮಾ ಅವರು ಎಂಎಸ್ ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಈಗ ಖಾಸಗಿ ಹೊರಗುತ್ತಿಗೆ ಮಾನವ ಸಂಪನ್ಮೂಲದಲ್ಲಿ ಕೆಲಸ ಮಾಡುತ್ತಿದ್ದಾರೆ

Copyright © All rights reserved Newsnap | Newsever by AF themes.
error: Content is protected !!