ಮಹಿಳಾ ವಿಶ್ವಕಪ್‍ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಭಾರತ 155 ರನ್‍ಗಳ ಜಯ ಗಳಿಸಿದೆ.
ಟೀಂ ಇಂಡಿಯಾ ನೀಡಿದ 317 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್‌ಗಳು 162 ರನ್‌ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು.
ಭಾರತ 155 ರನ್‌ಗಳ ಜಯದೊಂದಿಗೆ ಕೂಟದ ಎರಡನೇ ಬೃಹತ್ ಮೊತ್ತದ ಜಯ ದಾಖಲಿಸಿದೆ.
ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ, ಡಿಯಾಂಡ್ರಾ ಡಾಟಿನ್ 62 ರನ್ (46 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ 43 ರನ್ (36 ಎಸೆತ, 6 ಬೌಂಡರಿ) ಬಾರಿಸಿ ಮೊದಲ ವಿಕೆಟ್‍ಗೆ 100 ರನ್‍ಗಳ ಜೊತೆಯಾಟವಾಡಿತು.
ಈ ಇಬ್ಬರು ಬ್ಯಾಟರ್‌ಗಳು ಔಟ್ ಆದ ಬಳಿಕ ಕುಸಿತ ಕಂಡ ವಿಂಡೀಸ್, ಭಾರತಕ್ಕೆ ಸವಾಲು ಅನಿಸಲೇ ಇಲ್ಲ. ಭಾರತದ ಬೌಲರ್‌ಗಳು ವಿಂಡೀಸ್ ಬ್ಯಾಟರ್‌ಗಳ ವಿಕೆಟ್ ಬೇಟೆಯನ್ನು ಸರಾಗವಾಗಿ ಮುಂದುವರಿಸಿ 162 ರನ್‌ಗಳಿಗೆ ಕಟ್ಟಿಹಾಕಿ ಗೆಲ್ಲುವಂತೆ ಮಾಡಿದರು.
ಭಾರತದ ಪರ ಸ್ನೇಹ ರಾಣಾ 3 ವಿಕೆಟ್ ಪಡೆದರು ಮೇಘನಾ ಸಿಂಗ್ 2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್, ಜೂಲನ್ ಗೋಸ್ವಾಮಿ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರವಿಚಂದ್ರನ್ ಅಶ್ವಿನ್ ದಿಢೀರ್ ವಿದಾಯ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ಆಸ್ಟ್ರೇಲಿಯ ವಿರುದ್ಧ ಭರ್ಜರಿ ಗೆಲುವು: ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಜೀವಂತ