ಭಾರತದ ದಾಂಡಿಗಾಟ:
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಬಾರಿಸಿತು. ಐರ್ಲೆಂಡ್ ತಂಡಕ್ಕೆ 436 ರನ್‌ಗಳ ಬೃಹತ್ ಗುರಿಯನ್ನು ನೀಡಿದ ಭಾರತ, ಅದನ್ನು ತಡೆಯುವುದರಲ್ಲಿ ಯಶಸ್ವಿಯಾಯಿತು. ಐರ್ಲೆಂಡ್ 131 ರನ್‌ಗಳಲ್ಲೇ ಆಲೌಟ್ ಆಗಿ ಪರಾಭವ ಕಂಡಿತು.
ಸ್ಮೃತಿ-ಪ್ರತಿಕಾ ಜೋಡಿಯ ಅದ್ಭುತ ಆಟ:
ಆರಂಭಿಕರಾಗಿ ಕಣಕ್ಕಿಳಿದ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ತಮ್ಮ ಶತಕಗಳ ಮೂಲಕ ಪ್ರೇಕ್ಷಕರಿಗೆ Treat ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 233 ರನ್ ಜೊತೆಯಾಟವನ್ನು ನೀಡಿತು.
ಇವರಿಗೆ ರಿಚಾ ಘೋಷ್ (59 ರನ್), ತೇಜಲ್ ಹಸಬ್ನಿಸ್ (28 ರನ್), ಹರ್ಲಿನ್ ಡಿಯೋಲ್ (15 ರನ್), ದೀಪ್ತಿ ಶರ್ಮಾ (11 ರನ್), ಜೆಮಿಮಾ ರೊಡ್ರಿಗ್ಸ್ (4 ರನ್) ಅವರ ನೆರವೂ ಸಿಕ್ಕಿತು.
ಭಾರತದ ಹೊಸ ದಾಖಲೆಯ ಸಾರಾಂಶ:
ಐತಿಹಾಸಿಕ ಜಯದ ಅನ್ವಯ:
ಭಾರತೀಯ ಮಹಿಳಾ ತಂಡ 304 ರನ್‌ಗಳ ಅಂತರದಲ್ಲಿ ಗೆದ್ದು, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಅಂತರದ ಗೆಲುವು ಸಾಧಿಸಿದ 7ನೇ ತಂಡವಾಗಿದೆ.ಇದನ್ನು ಓದಿ –ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
ವಿಶ್ವದ 4ನೇ ಸ್ಥಾನ:
ಒಂದು ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ 4ನೇ ಮಹಿಳಾ ತಂಡವಾಗಿ ಭಾರತ ಹೊರಹೊಮ್ಮಿದೆ. ಈ ಪೈಕಿ ನ್ಯೂಜಿಲೆಂಡ್ (491, 455, 440 ರನ್) ಮೊದಲ ಮೂರು ಸ್ಥಾನಗಳಲ್ಲಿ ನಿಂತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು