ಅಮೆರಿಕದ ಚುನಾಯಿತ ಅಧ್ಯಕ್ಷ ಜೊ ಬೈಡನ್ ಭಾರತೀಯ ಮೂಲದ ಅಮೆರಿಕದ ಮಾಲಾ ಅಡಿಗ ಅವರನ್ನು ತಮ್ಮ ಪತ್ನಿ, ಅಮೆರಿಕದ ಫಸ್ಟ್ ಲೇಡಿ ಜಿಲ್ಲ್ ಬೈಡನ್ ಯೋಜನಾ ನಿರ್ದೇಶಕಿಯಾಗಿ ನೇಮಿಸಿಕೊಂಡಿದ್ದಾರೆ.
ಈ ಹಿಂದೆ ಮಾಲಾ ಅಡಿಗ ಜಿಲ್ಲ್ ಬೈಡನ್ ಅವರ ಹಿರಿಯ ಸಲಹೆಗಾರ್ತಿ ಯಾಗಿದ್ದರು. ಅಲ್ಲದೆ ಬೈಡನ್-ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಿರಿಯ ಯೋಜನಾ ಸಲಹೆಗಾರ್ತಿಯಾಗಿ ಕೂಡ ಕೆಲಸ ಮಾಡಿದ್ದರು.
ಈ ಹಿಂದೆ ಮಾಲಾ ಅಡಿಗ ಬೈಡನ್ ಫೌಂಡೇಶನ್ ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್ ನ ನಿರ್ದೇಶಕಿ ಕೂಡ ಆಗಿದ್ದರು.
ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಮಾಲಾ ಅಡಿಗ ಬ್ಯೂರೊ ಆಫ್ ಎಜುಕೇಶನ್ ಮತ್ತು ಕಲ್ಚರಲ್ ಅಫ್ಫೈರ್ಸ್ ನ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು.
ಇಲ್ಲಿನೊಯಿಸ್ ಮೂಲದ ಮಾಲಾ ಅಡಿಗ ಗ್ರಿನ್ನ್ ವೆಲ್ ಕಾಲೇಜಿನಲ್ಲಿ ಪದವಿ ಗಳಿಸಿ ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಯೂನಿವರ್ಸಿಟಿ ಆಫ್ ಚಿಕಾಗೊ ಲಾ ಸ್ಕೂಲ್ ನಲ್ಲಿ ಪದವಿ ಗಳಿಸಿ ವಕೀಲ ವೃತ್ತಿ ಮಾಡಿದ್ದಾರೆ. 2008ರಲ್ಲಿ ಬರಾಕ್ ಒಬಾಮಾ ಆಡಳಿತದಲ್ಲಿ ಅಸೋಸಿಯೇಟ್ ಅತೊರ್ನಿ ಜನರಲ್ ಗೆ ವಕೀಲೆಯಾಗಿದ್ದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ