December 26, 2024

Newsnap Kannada

The World at your finger tips!

cricket,sports,india

Bumrah scored 35 runs in a single over ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬಾರಿಸಿದ ಬೌಲರ್ ಬುಮ್ರಾ #thenewsnap #latestnews #Cricket #sports #Indian_cricket_team #INDvsENG #Cricket_world #Virat

ಒಂದೇ ಓವರ್ ನಲ್ಲಿ 35 ರನ್ ಬಾರಿಸಿದ ನಾಯಕ ಬುಮ್ರಾ

Spread the love

ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಕಂಡು ಸುಸ್ತಾಗಿದ್ದ ಇಂಗ್ಲೆಂಡ್ ಆಟಗಾರರು ಎರಡನೇ ದಿನದಾಟದಲ್ಲಿ ಭಾರತೀಯ ನಾಯಕ ಜಸ್ಪ್ರೀತ್ ಬುಮ್ರಾ ಅವರ ಬ್ಯಾಟಂಗ್ ಕಂಡು ಬೆರಗಾದರು.

ಬುಮ್ರಾ ಪರಾಕ್ರಮದಿಂದ ಇಂಗ್ಲೆಂಡ್ ನ ಹಿರಿಯ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಭರ್ಜರಿ 35 ರನ್ ಹರಿದು ಬಂದಿತು 84 ನೇ ಓವರ್ ಎಸೆದ ಬ್ರಾಡ್ ಟೆಸ್ಟ್ ಕ್ರಿಕೆಟ್ ಇತಿಹಾಸ ಅತ್ಯಂತ ದುಬಾರಿ ಓವರ್ ಎಸೆದರು. ಇದನ್ನು ಓದಿ –ನಮ್ಮತನ ಉಳಿಸಿಕೊಂಡು ಕನ್ನಡ ಭಾಷೆಯನ್ನು ಬೆಳೆಸಬೇಕು- ಟಿಎಸ್ ನಾಗಾಭರಣ

ವೈಡ್ ಮತ್ತು ನೋ ಬಾಲ್ ಕಾರಣದಿಂದ 8 ಎಸೆತ ಹಾಕಿದ ಬ್ರಾಡ್ ಬಿಟ್ಟುಕೊಟ್ಟಿದ್ದು ಬರೋಬ್ಬರಿ 35 ರನ್.

WhatsApp Image 2022 07 02 at 5.27.28 PM

4, 5 ವೈಡ್, ನೋ ಬಾಲ್ 6, 4, 4,4, 6, 1 ಹೀಗೆ ಸಾಗಿತ್ತು ಬ್ರಾಡ್ ಓವರ್. ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ನಾಯಕನಾದ ಬುಮ್ರಾ 16 ಎಸತೆಗಳಲ್ಲಿ ಅಜೇಯ 31 ರನ್ ಗಳಿಸಿದರು.

ಟೆಸ್ಟ್ ಕ್ರಿಕೆಟಿನ ದುಬಾರಿ ಓವರ್ ಎಸೆದ ದಾಖಲೆ ಇದುವರೆಗೆ ದಕ್ಷಿಣ ಆಫ್ರಿಕಾದ ಪೀಟರ್ ಸನ್
ಹೆಸರಲ್ಲಿತ್ತು. 2003ರಲ್ಲಿ ಬ್ರಯಾನ್ ಲಾರಾ ಒಂದೇ ಓವರ್ ನಲ್ಲಿ 28 ರನ್ ಬಾರಿಸಿದ್ದರು. ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗೆ ಆಲೌಟಾಗಿದೆ.

Copyright © All rights reserved Newsnap | Newsever by AF themes.
error: Content is protected !!