ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ

Team Newsnap
1 Min Read

ಕಾರು ಉತ್ಪಾದಕ ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧವಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.‌

ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಕೇವಲ ಮಾರುಕಟ್ಟೆಗೆ ತರುವುದು ಮಾತ್ರವಲ್ಲ, ಟೆಸ್ಲಾ ಕಾರುಗಳು ಭಾರತದಲ್ಲಿ ತಯಾರಾಗಬೇಕು ಎಂಬುವುದರ ಬಗ್ಗೆ ಸಚಿವ ಗಡ್ಕರಿ ಸ್ಪಷ್ಟವಾಗಿ ಹೇಳಿದ್ದಾರೆ .

“ಭಾರತದಲ್ಲಿ ಸ್ಥಳೀಯ ಮಾರಾಟಗಾರರನ್ನು ನೇಮಿಸಿಕೊಳ್ಳುವ ಮೂಲಕ ದೇಶದಲ್ಲಿ ಸಂಪೂರ್ಣ ಉತ್ಪಾದನಾ ಘಟಕವನ್ನು ಮಾಡಬೇಕು” “ನಂತರದಲ್ಲಿ ನಾವು ಹೆಚ್ಚಿನ ರಿಯಾಯಿತಿಗಳನ್ನು ನೀಡಬಹುದು.” ಎಂದು ಗಡ್ಕರಿ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ವರ್ಷ, ಗಡ್ಕರಿ 2021 ರ ಆರಂಭದಲ್ಲಿ ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದರು. ಆದರೆ, ನಂತರ, ಟೆಸ್ಲಾ ಮೊದಲು ಭಾರತದಲ್ಲಿ ಮಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ ಮತ್ತು ನಂತರದ ಹಂತದಲ್ಲಿ ಉತ್ಪಾದನೆಯ ಘಟಕದ ಬಗ್ಗೆ ಯೋಚಿಸುತ್ತದೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೆರವು‌‌ ಸಿಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.

Share This Article
Leave a comment