December 28, 2024

Newsnap Kannada

The World at your finger tips!

team imdia

ಇಂದಿನ ಕಿವೀಸ್​​ ವಿರುದ್ದದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯ

Spread the love

T 20 ವಿಶ್ವಕಪ್​ ಟೂರ್ನಿಯಲ್ಲಿ ಭಾನುವಾರಸಂಜೆ ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಪಂದ್ಯ ಟೀಮ್​ ಇಂಡಿಯಾ ಪಾಲಿಗೆ ಅತೀ ಮಹತ್ವದ್ದಾಗಿದೆ.

ಇಂದಿನ ಪಂದ್ಯದ ಸೋಲು-ಗೆಲುವು ಟೂರ್ನಿಯಲ್ಲಿ ಭಾರತದ ಭವಿಷ್ಯವನ್ನ ನಿರ್ಧರಿಸಲಿದೆ.
ಐಸಿಸಿ 2021ರ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ಹ್ಯಾಟ್ರಿಕ್​ ಗೆಲುವು ದಾಖಲಿಸಿದೆ.

ಇನ್ನೊಂದು ಪಂದ್ಯ ಗೆದ್ದರೆ ಸೆಮೀಸ್​ಗೆ ಎಂಟ್ರಿ ಕೊಡಲಿದೆ. ಭಾರತವೂ ಈ ಹಾದಿಗೆ ಬರಬೇಕೆಂದರೆ ಕಿವೀಸ್​ ವಿರುದ್ಧ ಗೆಲ್ಲಲೇಬೇಕು.

ಒಂದು ವೇಳೆ ಸೋತರೆ ತೀವ್ರ ಹೋರಾಟ ನಡೆಸಬೇಕಾಗುತ್ತೆ. ಉಳಿದ 3 ಪಂದ್ಯಗಳಲ್ಲಿ ಗೆದ್ದರೂ ರನ್​ರೇಟ್​​ ಗೇಮ್​ ಪ್ಲೇ ಮಾಡಲಿದೆ. ಜೊತೆಗೆ ಕಿವೀಸ್ ತಂಡ​ ಉಳಿದ 3 ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಕಾಣಬೇಕಾಗುತ್ತೆ. ಹೀಗಾಗಿಯೇ ಇಂದು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.

ಅಫ್ಘಾನಿಸ್ತಾನ ಕೂಡ ಸೆಮಿಸ್​ ರೇಸ್​​ಗೆ ಎಂಟ್ರಿ ಕೊಟ್ಟಿದೆ. ಈಗಾಗಲೇ 2ರಲ್ಲಿ ಒಂದು ಪಂದ್ಯ ಗೆದ್ದಿರುವ ಆಘ್ಘನ್​​, ಭಾರತ ಮತ್ತು ಕಿವೀಸ್​ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.

18 ವಷ೯ದಿಂದ ಗೆದ್ದಿಲ್ಲ ಭಾರತ : ICC ಟೂರ್ನಮೆಂಟ್​​ಗಳಲ್ಲಿ ಕಳೆದ 18 ವರ್ಷಗಳಿಂದ ಕಿವೀಸ್​​ ವಿರುದ್ಧ ಭಾರತ ಗೆದ್ದಿಲ್ಲ.

2019ರ ವಿಶ್ವಕಪ್​, ಜೂನ್​ನಲ್ಲಿ ನಡೆದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಭಾರತದ ಚಾಂಪಿಯನ್​ ಪಟ್ಟದ ಕನಸಿಗೆ ಪೆಟ್ಟು ಕೊಟ್ಟಿದ್ದು ಇದೇ ನ್ಯೂಜಿಲೆಂಡ್​​.

ಹೀಗಾಗಿ ಈ ಪಂದ್ಯ ಗೆದ್ದು ಸೆಮೀಸ್​​​​ ಆಸೆ ಜೀವಂತ ಮಾಡಿಕೊಳ್ಳೋದು ಜೊತೆ ಸೇಡು ತೀರಿಸಿಕೊಳ್ಳೋವ ತವಕವೂ ಕೊಹ್ಲಿ ಕ್ಯಾಂಪ್​ನಲ್ಲಿದೆ.

Copyright © All rights reserved Newsnap | Newsever by AF themes.
error: Content is protected !!