March 18, 2025

Newsnap Kannada

The World at your finger tips!

security

ಭಾರತದ ವಿರುದ್ಧ ಕುತಂತ್ರಿ‌ ಚೀನಾ ಸೈಬರ್ ದಾಳಿ

Spread the love

ನ್ಯೂಸ್ ಸ್ನ್ಯಾಪ್
ನವದೆಹಲಿ

ಭಾರತದ ಗಡಿಯಲ್ಲಿ‌ ನಿರಂತರವಾಗಿ ಕಾಲ್ಕೆರೆದುಕೊಂಡು ಜಗಳ ಮಾಡುತ್ತಿರುವ ಚೀನಾ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸೈಬರ್ ದಾಳಿ‌ ಮಾಡುತ್ತಿರುವುದು ಬಯಲಾಗಿದೆ.

ಭಾರತದ ರಾಜಕೀಯ ಗಣ್ಯರು ಸೇರು ಇತರೆ ರಂಗದ ೧೦,೦೦೦ ಗಣ್ಯರನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ಮಾಹಿತಿಯನ್ನು ಚೀನಾದ ಸೈಬರ್ ಕಳ್ಳರು ಕದಿಯುತ್ತಿದ್ದಾರೆ.

ಇತರೆ ದೇಶಗಳ ಗಣ್ಯರ ಮಾಹಿತಿಗಳನ್ನು ಕದಿಯುವದನ್ನೇ ಕಾಯಕ ಮಾಡಿಕೊಂಡಿದ್ದ ಶೆನ್ ಝೆನ್ ಮೂಲದ ‘ಝೆನ್ ಹುವಾ ಡೇಟಾ ಇನ್ಫಾರ್ಮೇಶನ್ ಟೆಕ್ನಾಲಜಿ ಕಂಪನಿ ಲಿಮಿಟೆಡ್’ ಎಂಬ ಕಂಪನಿಯು ಭಾರತದ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂತಾದವರ ಮಾಹಿತಿಗಳನ್ನು ಕದ್ದು ಚೀನ ಸರ್ಕಾರಕ್ಕೆ ರವಾನೆ ಮಾಡುತ್ತಿತ್ತು ಎಂಬುದು ತಿಳಿದು ಬಂದಿದೆ.

ಭಾರತದ ಒಟ್ಟು ೨೪ ಮುಖ್ಯಮಂತ್ರಿಗಳು, ೩೫೦ ಸಂಸದರು, ೭೦೦ ರಾಷ್ಟ್ರೀಯ ನಾಯಕರ ಜೊತೆ ಇವರ ಕುಟುಂಬದ ಮೇಲು ಬೇಹುಗಾರಿಕೆ ಮಾಡುತ್ತಿತ್ತು. ಇದರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಕೇವಲ ಭಾರತದ ರಾಜಕೀಯಕ್ಕೆ ನಿಲ್ಲಿಸದ ಚೀನಾ ಮೂಲದ ಸೈಬರ್ ಕಳ್ಳರು, ಭಾರತದ ಸೈನ್ಯದ ಮೇಲೆಯೂ ತನ್ನ ಬೇಹುಗಾರಿಕಾ ಕಣ್ಣುಗಳನ್ನಿಟ್ಟಿದೆ.

ಚೀನಾದ ಈ ಅಸಹ್ಯವಾದ ಕ್ರಿಯೆಯ ಮೂಲ ಉದ್ದೇಶ ಭಾರತದಲ್ಲಿ ಅರಾಜಕತೆ ಸೃಷ್ಠಿಸುವದೇ ಆಗಿದೆ ಎನ್ನುತ್ತದೆ ತನಿಖೆ. ಇನ್ನುಮುಂದಾದರೂ ಭಾರತವು ಜಾಗೃತೆಯಿಂದಿರಬೇಕು.

Copyright © All rights reserved Newsnap | Newsever by AF themes.
error: Content is protected !!