ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ಸೇನೆ ಎಲ್ಎಸಿಯಲ್ಲಿ ಸೈನ್ಯ ಜಮಾವಣೆಯಾಗುತ್ತಿದೆ. ಈಗ ಶಾಂತಿ ಮಾತುಕತೆಗಾಗಿ ಉಭಯ ದೇಶಗಳು ಮುಂದಾಗಿ, ಗೌಪ್ಯ ಚರ್ಚೆಯಲ್ಲಿ ತೊಡಗಿವೆ.
ಬ್ಲೂಮ್ ಬರ್ಗ್ ಇಂಡಿಯಾ ಎಕಾನಾಮಿಕ್ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ಸೇನೆ ಜಮಾವಣೆಯಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದನ್ನು ಒಪ್ಪಿಕೊಂಡರು. ಇದೇ ವೇಳೆ ಗೌಪ್ಯ ಚರ್ಚೆಯ ಬಗ್ಗೆ ಮಾತನಾಡಿದ ‘ಈಗಲೇ ಗೌಪ್ಯ ಚರ್ಚೆಯ ಮಾಹಿತಿಯನ್ನು ಬಿಟ್ಟುಕೊಡಲಾಗುವದಿಲ್ಲ. ಅಲ್ಲದೇ ಚರ್ಚೆಯ ಫಲಿತಾಂಶದ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ’ ಎಂದರು.
‘ನಮ್ಮ ಗಡಿಯಲ್ಲಿ ನಾವು, ಅವರ ಗಡಿಯಲ್ಲಿ ಅವರು ಸೇನೆಯನ್ನು ಜಮಾವಣೆ ಮಾಡಿದ್ದೇವಾದರೂ, ಎರಡೂ ದೇಶಗಳು ಸಮಾನ ಅಂತರವನ್ನು ಕಾಯ್ದುಕೊಂಡಿವೆ. 1993ರಲ್ಲಿ ಭಾರತ-ಚೀನಾ ಶಾಂತಿ ಒಪ್ಪಂದದ ನಂತರ ಎರಡೂ ದೇಶಗಳ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು. ಆದರೆ ಒಪ್ಪಂದದ ನಿಯಮಗಳನ್ನು ಮುರಿದಾಗ ಶಾಂತಿ-ಸೌಹಾರ್ದತೆಯಲ್ಲಿ ವಿರಸವುಂಟಾಗುತ್ತದೆ’ ಎಂದು ಅವರು ಪರೋಕ್ಷವಾಗಿ ಚೀನಾದ ನಡೆಯನ್ನು ವಿರೋಧಿಸಿದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ