January 30, 2026

Newsnap Kannada

The World at your finger tips!

bbmp

Major Surgery in BBMP: Transfer of 9 Officers: Order of DCM DK ಬಿಬಿಎಂಪಿ ಯಲ್ಲಿ ಮೇಜರ್ ಸರ್ಜರಿ : 9 ಅಧಿಕಾರಿಗಳ ವರ್ಗಾವಣೆ #BBMP #DKShi

ಬಿಬಿಎಂಪಿ ವಾರ್ಡುಗಳ ಸಂಖ್ಯೆ 243 ಕ್ಕೆ ಹೆಚ್ಚಳ – ಗೆಜೆಟ್ ಪ್ರಕಟಣೆ

Spread the love

ಬೆಂಗಳೂರು ಬೃಹತ್ ಮಾಹಾ ನಗರ (ಬಿಬಿಎಂಪಿ) ವಾರ್ಡ್ ಗಳ ಸಂಖ್ಯೆ 243 ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಗೆಜೆಟ್ ನಲ್ಲಿ ಅಧೀಕೃತ ಆದೇಶ ಹೊರಡಿಸಿದೆ.

ಈ ಹಿಂದೆ ಪಾಲಿಕೆಯ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ 225ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆಯು ತೀರ್ಮಾನಿಸಿತ್ತು. ಆದರೆ ಸಂಖ್ಯಾ ಶಾಸ್ತ್ರಕ್ಕೆ ಮೊರೆ ಹೋದ ಕೆಲವು ಮಂದಿ 243 ವಾರ್ಡುಗಳ ಸಂಖ್ಯೆಗಳು ಇದ್ದರೆ ಸಾಕು ಎಂದು ಸಿಎಂಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇದೀಗ 243 ವಾರ್ಡ್ಗಳನ್ನಾಗಿ ಮಾರ್ಪಡಿಸಲಾಗಿದೆ ಎನ್ನಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ವಾರ್ಡ್ ಸಂಖ್ಯೆಯನ್ನು ಹೆಚ್ಚಳಕ್ಕೆ ಮುಂದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಒಟ್ಟಾರೆ ಶೀಘ್ರವೇ ನಡೆಯಲಿರುವ ಬಿಬಿಎಂಪಿ ಚುನಾವಣೆಯಲ್ಲಿ ಯಾರು ಹೆಚ್ಚು ಸ್ಥಾನವನ್ನು ಪಡೆದುಕೊಳ್ಳುತ್ತಾರೆ..? ವಾರ್ಡ್ ಸಂಖ್ಯೆಯನ್ನು ಹೆಚ್ಛಳ ಮಾಡಿರುವುದು ಯಾರಿಗೆ ಲಾಭವಾಗಲಿದೆ..? ಎನ್ನುವುದನ್ನು ಕಾದು ನೋಡಬೇಕಾಗಿದೆ.

error: Content is protected !!