ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ‘ಹಾಲಿಗೆ’ 2.10 ರೂ ಹೆಚ್ಚಳ

Team Newsnap
1 Min Read

ಬೆಂಗಳೂರು: ಪೆಟ್ರೋಲ್‌, ಡಿಸೇಲ್‌ ಮೇಲಿನ ಸೆಸ್‌ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಇದೀಗ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.

ಕೆಎಂಎಫ್‌ ಪ್ರತಿ ಲೀಟರ್‌ ಹಾಲಿನ ದರವನ್ನು 2.10 ರೂಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿರುವ ರಾಜ್ಯದ ಜನತೆ ಮತ್ತೆ ಕಿಸೆಗೆ ಬಾರವಾಗುವುದರಲ್ಲಿ ಅನುಮಾನವಿಲ್ಲ.

ಒಕ್ಕೂಟಗಳು ದರ ವಿಚಾರವಾಗಿ ಆಗುತ್ತಿರುವ ನಷ್ಟದ ಬಗ್ಗೆ ಸಭೆಯಲ್ಲಿ ತಮ್ಮ ಸಮಸ್ಯೆಯನ್ನು ಸಿಎಂ ಮುಂದೆ ಹೇಳಿಕೊಂಡಿದ್ದ ಹಿನ್ನಲೆ , ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಹಾಲಿನ ಬೆಲೆ ಏರಿಕೆಗೆ ಗ್ರೀನ್‌ ಸಿಗ್ನಲ್‌ ನೀಡಿದ ಹಿನ್ನಲೆಯಲ್ಲಿ ಈಗ ಕೆ.ಎಂಎಫ್ ಅಧಿಕೃತ ಆದೇಶವನ್ನು ಹೊರಡಿಸಿದೆ.ನಿವೃತ್ತ ಸಿಜಿಎಂ ಎ.ಕೆ.ಸಿಂಗ್ ‘ಬಂಧನ್ ಬ್ಯಾಂಕ್’ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಕ

ರಾಜ್ಯ ಸರ್ಕಾರ ಗೌರಂಟಿ ಯೋಜನೆ ಹಣ ಹೊಂದಿಸಲು ಪರದಾಡುತ್ತಿದೆ ಎನ್ನಲಾಗುತ್ತಿದ್ದು, ಹೆಚ್ಚುವರಿ ಹಣವನ್ನು ಸಂಗ್ರಹಿಸಲು ರಾಜ್ಯದ ಜನತೆ ಮೇಲೆ ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಜನ ಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a comment